Monday 7 November 2011

ಏಕೊ ಈ ಕೋಪ ಶಂಕರ


ಏಕೊ ಈ ಕೋಪ ಶಂಕರ ಶಿವಶಂಕರಾ
ಏಕೊ ಈ ತಾಪ ಶಂಕರ ಶಿವಶಂಕರಾ
ಹರ ಶಂಕರಾ ಏಕೊ ಈ ಕೋಪ ಶಂಕರ


ದಾನ ಧರ್ಮವ ಮಾಡುತ ಜನಕ
ನೀಡುತ್ತಲಿದ್ದ ಧನ ಕನಕ
ದಾನ ಧರ್ಮವ ಮಾಡುತ ಜನಕ
ನೀಡುತ್ತಲಿದ್ದ ಧನ ಕನಕ
ಎಲ್ಲ ನಿನ್ನ ಲೀಲೆ ಎಂದಿಹ
ಎಲ್ಲ ನಿನ್ನ ಲೀಲೆ ಎಂದಿಹ
ಭಕ್ತನಿಗೆ ಈ ಬೇಗೆ ಏಕೊ ಶಂಕರಾ


ಏಕೊ ಈ ಕೋಪ ಶಂಕರ ಶಿವಶಂಕರಾ
ಏಕೊ ಈ ತಾಪ ಶಂಕರ ಶಿವಶಂಕರಾ
ಹರ ಶಂಕರಾ ಏಕೊ ಈ ಕೋಪ ಶಂಕರ


ಯಾಗ ಯೋಗವೇ ಕಾಯಕವೆನುತ ಸಾಗಿಸುತಿರುವ ಘನ ವ್ರತವ
ದೀನನಾಗಿ ನಿನ್ನೆ ನಂಬಿಹ
ದೀನನಾಗಿ ನಿನ್ನೆ ನಂಬಿಹ
ಭಕ್ತನಿಗೆ ಈ ಶಿಕ್ಷೆ ಏಕೊ ಶಂಕರಾ


ಏಕೊ ಈ ಕೋಪ ಶಂಕರ ಶಿವಶಂಕರಾ ಶಿವಶಂಕರಾ
ಏಕೊ ಈ ತಾಪ ಶಂಕರ ಶಿವಶಂಕರಾ ಹರ ಶಂಕರಾ ಶಿವಶಂಕರಾ ಹರ ಶಂಕರಾ


ಗುರಿ ಗುರಿಸಿ ಗುರಿ ಎಂದು ಬಡ ಸಿಡಿಲು ಬಡಿದು
ಆರ್ಭಟಿಸಿ ಗೋರ್ಗರೆದು ಮಳೆ ಸುರಿಯಲಿ
ಜಟೆಯೊಳಗೆ ಬಿಗಿದಿರುವ ಗಂಗೆಯನು ಕಳಿಸು
ಬಾಯಾರಿ ಬಳಲಿರುವ ಭೂಮಿಯ ತಣಿಸು
ಭಕ್ತಿಯ ಉಕ್ತಿಯೆ
ಭಕ್ತಿಯ ಉಕ್ತಿಯೆ ಶಕ್ತೇರಿಸು


ಓಂ ನಮಃ ಶಿವಾಯಾ
ಓಂ ನಮಃ ಶಿವಾಯಾ
ಓಂ ನಮಃ ಶಿವಾಯಾ
ಓಂ ನಮಃ ಶಿವಾಯಾ

ಶಿವಶಿವ ಎಂದರೆ ಭಯವಿಲ್ಲ


ಶಿವಶಿವ ಎಂದರೆ ಭಯವಿಲ್ಲ
ಶಿವಶಿವ ಎಂದರೆ ಭಯವಿಲ್ಲ
ನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವಭಕ್ತನಿಗೇ ನರಕಾಯಿಲ್ಲ
ಶಿವಭಕ್ತನಿಗೇ ನರಕಾಯಿಲ್ಲ
ಜನುಮಜನುಮಗಳ ಕಾಟವದಿಲ್ಲ
ಶಿವಶಿವ ಎಂದರೆ ಭಯವಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ


ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಅನ್ನದಾನವ ತೊರೆಯದಿರು
ನಾನು ನನ್ನದು ಎನ್ನದಿರು
ಉನ್ನತಿ ಸಾಧಿಸೇ ಹಗಳಿರುಳು
ಉನ್ನತಿ ಸಾಧಿಸೇ ಹಗಳಿರುಳು
ದೀನಾನಾಥನ ಮರೆಯದಿರು
ಶಿವಶಿವ ಎಂದರೆ ಭಯವಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ


ಭೋಗಭಾಗ್ಯದಾ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಭೋಗಭಾಗ್ಯದಾ ಬಲೆಯೊಳಗೆ
ಬಳಲಿ ಬಾಡದೇ ಇಳೆಯೊಳಗೆ
ಕಾಯಕ ಮಾಡುತ ಎಂದೆಂದೂ
ಕಾಯಕ ಮಾಡುತ ಎಂದೆಂದೂ
ಆತ್ಮಾನಂದವ ಪಡೆಯುತಿರು
ಶಿವಶಿವ ಎಂದರೆ ಭಯವಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ


ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ದಾನವೇ ಜಗದೊಳು ತಪವಯ್ಯಾ
ಧ್ಯಾನವೇ ಘನಕರ ಜಪವಯ್ಯಾ
ಅಪಕಾರವ ನೀ ಮಾಡಿದರೇ
ಅಪಕಾರವ ನೀ ಮಾಡಿದರೇ
ಕೈಲಾಸವದು ಸಿಗದಯ್ಯಾ
ಶಿವಶಿವ ಎಂದರೆ ಭಯವಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ
ಶಿವನಾಮಕ್ಕೆ ಸಾಟಿ ಬೇರಿಲ್ಲ

ಅತಿಥಿ ಸೇವೆಯೆ


ಅತಿಥಿ ಸೇವೆಯೆ ಪಾವನವೆಂದು ಪಾಲಿಸಿಕೊಂಡಿಹ ನಮಗೆ
ಶಿವನೆ ಗತಿಯಿಂದು ಹರನೆ ನೀನೆ ಗತಿಯಿಂದು


ಪಾಪಪುಣ್ಯ ಎಲ್ಲವು ನಿನ್ನ ಪಾದಕೆ ನೀರಾಯಿತು
ಶಿವನೆ ಪಾದಕೆ ನೀರಾಯಿತು ಶಿವನೆ ಪಾದಕೆ ನೀರಾಯಿತು


ಅತಿಥಿ ಸೇವೆಯೆ ಪಾವನವೆಂದು ಪಾಲಿಸಿಕೊಂಡಿಹ ನಮಗೆ
ಶಿವನೆ ಗತಿಯಿಂದು


ಕರುಣೆಯ ತೋರಿದ ಶರಣರ ದಯೆಯಿಂದ
ಬಂದೆ ಭವದೊಳಗೆ ಜನಿಸಿ ಕಂದ ಬಂದೆ ಭವದೊಳಗೆ ಜನಿಸಿ


ಪರಮ ತ್ಯಾಗವ ಮಾಡಿ ನಮ್ಮಯ ಪರಮ ತ್ಯಾಗವ ಮಾಡಿ ನಮ್ಮಯ
ಧರ್ಮವ ಉಳಿಸಿ ವ್ರತವ ನಡೆಸಿ ಪಾರಾದೆ ವ್ರತವ ನಡೆಸಿ ಪಾರಾದೆ


ಅತಿಥಿ ಸೇವೆಯೆ ಪಾವನವೆಂದು ಪಾಲಿಸಿಕೊಂಡಿಹ ನಮಗೆ
ಶಿವನೆ ಗತಿಯಿಂದು ಹರನೆ ನೀನೆ ಗತಿಯಿಂದು


ಹಡೆದ ಕಂದನ ಕಡಿದ ಶಿರವ
ನೋಡಿ ಎದೆ ಬಿರಿದು ಉರಿದು ನೋಡಿ ಎದೆ ಬಿರಿದು


ಹರಿಸುವ ಹಾಗಿಲ್ಲ ಕೋಡಿ ಕಣ್ಣೀರು ಹರಿಸುವ ಹಾಗಿಲ್ಲ ಕೋಡಿ ಕಣ್ಣೀರು
ಹರುಷ ತಳೆದು ಸುರಿಸಬೇಕು ಪನ್ನೀರು ಸುರಿಸಬೇಕು ಪನ್ನೀರು


ಅತಿಥಿ ಸೇವೆಯೆ ಪಾವನವೆಂದು ಪಾಲಿಸಿಕೊಂಡಿಹ ನಮಗೆ
ಶಿವನೆ ಗತಿಯಿಂದು ಹರನೆ ನೀನೆ ಗತಿಯಿಂದು

ನಿನ್ನಾ ರೂಪು


ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಮಿಂದಾಗಾ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗಾ...//ನಿನ್ನಾ ರೂಪು //


ಮನಸಿನಾ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದಾ ಕುಲುಮೆಯಾಗೆ ನೂರು ಬಯಕೇ ಸಿಡಿದೈತೆ
ನಿನ್ನಾ ಕಾಣುವ ಬಾವ ಬೆಳೆದು ನನಾ ಕನಸು ಕಡೆದೈತೆ..//ನಿನ್ನಾ ರೂಪು //


ತೆರೆಯದಾ ಬಯಕೆ ಬಾನೂ ದೂರಾ ದೂರಾ ಸರಿದೈತೆ
ಹರೆಯದಾ ಹಂಬಲ ಗಂಗೇ ಬಾಗೀ ಬಳುಕೀ ಹರೆದೈತೆ
ನಿನ್ನಾ ಸ್ನೇಹಕೆ ಬಾಳು ನಲಿದು ಆಸೆ ಗಂಧಾ ಹರಡೈತೆ...//ನಿನ್ನಾ ರೂಪು //


ಮರೆಯದಾ ಮೋಹ ಉಕ್ಕೀ ತೇಲೀ ತೇಲೀ ಮೊರೆದೈತೆ
ಇಂಗದಾ ದಾಹ ಬೇಗೇ ಕಾದೂ ಕಾದೂ ಕರೆದೈತೆ
ನಿನ್ನಾ ಸೇರುವ ರಾಗರಂಗಿಗೆ ನನ್ನಾ ಮನಸೂ ತೆರೆದೈತೆ..  //ನಿನ್ನಾ ರೂಪು //