Monday 7 November 2011

ಏಕೊ ಈ ಕೋಪ ಶಂಕರ


ಏಕೊ ಈ ಕೋಪ ಶಂಕರ ಶಿವಶಂಕರಾ
ಏಕೊ ಈ ತಾಪ ಶಂಕರ ಶಿವಶಂಕರಾ
ಹರ ಶಂಕರಾ ಏಕೊ ಈ ಕೋಪ ಶಂಕರ


ದಾನ ಧರ್ಮವ ಮಾಡುತ ಜನಕ
ನೀಡುತ್ತಲಿದ್ದ ಧನ ಕನಕ
ದಾನ ಧರ್ಮವ ಮಾಡುತ ಜನಕ
ನೀಡುತ್ತಲಿದ್ದ ಧನ ಕನಕ
ಎಲ್ಲ ನಿನ್ನ ಲೀಲೆ ಎಂದಿಹ
ಎಲ್ಲ ನಿನ್ನ ಲೀಲೆ ಎಂದಿಹ
ಭಕ್ತನಿಗೆ ಈ ಬೇಗೆ ಏಕೊ ಶಂಕರಾ


ಏಕೊ ಈ ಕೋಪ ಶಂಕರ ಶಿವಶಂಕರಾ
ಏಕೊ ಈ ತಾಪ ಶಂಕರ ಶಿವಶಂಕರಾ
ಹರ ಶಂಕರಾ ಏಕೊ ಈ ಕೋಪ ಶಂಕರ


ಯಾಗ ಯೋಗವೇ ಕಾಯಕವೆನುತ ಸಾಗಿಸುತಿರುವ ಘನ ವ್ರತವ
ದೀನನಾಗಿ ನಿನ್ನೆ ನಂಬಿಹ
ದೀನನಾಗಿ ನಿನ್ನೆ ನಂಬಿಹ
ಭಕ್ತನಿಗೆ ಈ ಶಿಕ್ಷೆ ಏಕೊ ಶಂಕರಾ


ಏಕೊ ಈ ಕೋಪ ಶಂಕರ ಶಿವಶಂಕರಾ ಶಿವಶಂಕರಾ
ಏಕೊ ಈ ತಾಪ ಶಂಕರ ಶಿವಶಂಕರಾ ಹರ ಶಂಕರಾ ಶಿವಶಂಕರಾ ಹರ ಶಂಕರಾ


ಗುರಿ ಗುರಿಸಿ ಗುರಿ ಎಂದು ಬಡ ಸಿಡಿಲು ಬಡಿದು
ಆರ್ಭಟಿಸಿ ಗೋರ್ಗರೆದು ಮಳೆ ಸುರಿಯಲಿ
ಜಟೆಯೊಳಗೆ ಬಿಗಿದಿರುವ ಗಂಗೆಯನು ಕಳಿಸು
ಬಾಯಾರಿ ಬಳಲಿರುವ ಭೂಮಿಯ ತಣಿಸು
ಭಕ್ತಿಯ ಉಕ್ತಿಯೆ
ಭಕ್ತಿಯ ಉಕ್ತಿಯೆ ಶಕ್ತೇರಿಸು


ಓಂ ನಮಃ ಶಿವಾಯಾ
ಓಂ ನಮಃ ಶಿವಾಯಾ
ಓಂ ನಮಃ ಶಿವಾಯಾ
ಓಂ ನಮಃ ಶಿವಾಯಾ

No comments:

Post a Comment