Monday 31 October 2011

ಚಪ್ಪಾಳೆ

ಚಿತ್ರ  : ಚಪ್ಪಾಳೆ 


ಸಾಧನೆ ತೋರಿದ ನಿಮಗೆಲ್ಲಾ ಸಾವಿರ ಸಾವಿರ ಚಪ್ಪಾಳೆ
ನಾಡಿನ ಕೀರ್ತಿಯ ಬೆಳಗಿಸಿದ ನಿಮಗಿದೊ ಹೆಮ್ಮೆಯ ಚಪ್ಪಾಳೆ
ಚಪ್ಪಾಳೆ..ಚಪ್ಪಾಳೆ ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ


ಕನ್ನಂಬಾಡಿಯ ಕಟ್ಟಿಸಿದ ಭಾರತ ರತ್ನಗೆ ಚಪ್ಪಾಳೆ
ಕನ್ನಡ ಡಿಂಡಿಮ ಬಾರಿಸಿದ ಕವಿಗಳೇ ನಿಮಗಿದ್ದೋ ಚಪ್ಪಾಳೆ
ದೇಶವ ಕಾಯುವ ಯೋಧರಿಗೆ ನಮ್ಮೆದೆಯಾಳದ ಚಪ್ಪಾಳೆ
ಅನ್ನವ ನೀಡುತ ಸಲಹಿರುವ ನೇಗಿಲ ಯೋಗಿಗೆ ಚಪ್ಪಾಳೆ ಚಪ್ಪಾಳೆ..ಚಪ್ಪಾಳೆ.
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ


ಕಣ್ಣನು ನೀಡುವ ಅಣ್ಣನಿಗೆ ನಮ್ಮಯ ಪ್ರೀತಿಯ ಚಪ್ಪಾಳೆ
ದೇಶವ ಆಳಿದ ನಾಯಕರೆ ನಿಮಗಿದೋ ಗೌರವ ಚಪ್ಪಾಳೆ
ನಾದದ ಸುಧೆಯನು ಹರಿಸಿರುವ ಗಾಯಕರೇ ಇದೋ ಚಪ್ಪಾಳೆ
ಧೈರ್ಯ ಶೌರ್ಯವ ಮೆರೆದಿರುವ ವೀರ ವನಿತೆಯರೆ ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ


ಕೀರ್ತನೆ ವಚನವ ಭೋಧಿಸಿದ ಯೋಗಿವರೇಣ್ಯರೇ ಚಪ್ಪಾಳೆ
ವೀಣಾಲೋಕದ ಸಾಧಕರೆ ನಿಮಗಿದೊ ಸ್ಪೂರ್ತಿಯ ಚಪ್ಪಾಳೆ
ಬೆಳ್ಳಿತೆರೆಯ ತಾರೆಗಳೆ ನಿಮಗಭಿಮಾನದ ಚಪ್ಪಾಳೆ
ನಾಡಿಗೆ ಅಣ್ಣನೆ ಆಗಿರುವ ರಾಜಣ್ಣನಿಗೆ ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ




ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ

Thursday 27 October 2011

ಒಮ್ಮೆ ಬಾರೋ


ಚಿತ್ರ : ಸಂಜು ವೆಡ್ಸ್ ಗೀತ 


ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ
ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು......
ಎಡಗಾಲು ಎಡವಿದರು ಸುಳಿವಿಲ್ಲ ಎಲ್ಲಿ ನೀನು
ಕೈ ತುತ್ತು ಜಾರಿದ ಕ್ಷಣ ರಂಗೋಲಿಯ ಬರೆದೆನು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ
ಅದೇ ಹಾದಿ ತುಳಿವಾಗ ಎದೆಯಲ್ಲಿ ನೂರು ನೋವು
ಇಳೆ ಸಂಜೆ ಕಳೆವಾಗ ಸುಳಿದಂತೆ ಇಲ್ಲಿ ಸಾವು
ಅಸುನೀಗೊ ಮುನ್ನ ನಿನ್ನನು ತುಸು ನೋಡಲು ಕಾದೀಹೆನು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ ಬೇಗ ಹೇಗಿದ್ದರು
ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಸ್ಪರ್ಶ


ಚಿತ್ರ : ಸ್ಪರ್ಶ 


ಬರೆಯದ ಮೌನದ ಕವಿತೆ ಹಾಡಾಯಿತು... ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು....... ಸುಖ ತಂದಿತು
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ
ಭಾವ ಕಂಪು ಪರರಿಗಾಗಿ ಸಕಲ ಜನ್ಮವು
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು
ಕಾಲ ಬರೆದ ಹೊಸತು ಹಾಡು ಹಾಡಲಾರೆನು
ಮನಸ ಪುಟದೀ ಬರೆದ ಗೀತೆ ಮರೆಯಲಾರೆನು
ಎಲ್ಲಿಯ ಬಂದವು ಕಾಣೆ ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ ನನ್ನ ಈ ಹೃದಯದ ಭಾವ
ಯಾವ ಹೂವು ಯಾರ ಮುಡಿಗೊ ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ
ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು
ಬಾಳಲಿ ಪಡೆದದು ಏನೋ ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ

ತನ್ಮಯಳಾದೇನು


ಚಿತ್ರ : ಪರಮಾತ್ಮ 


ತನ್ಮಯಳಾದೇನು ತಿಳಿಯುವ ಮುನ್ನವೇ,...
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
ನಿನ್ನಲಿ ಜೀವವನ್ನು ಅಡವಿಟ್ಟೂ ಬಂದೆ ನಾನು..
ಕಣ್ಮುಚ್ಚಿಯೇ ನಾನ್ ಓದಲೇ ಪುಟ ಒಂದನು.. ಹರಿಯುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ...
ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ...
ಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆ....
ಈ ಮಾನಸಿಗೆ ಭಾಸವೂ .. ಇಲ್ಲೇ ನೀನು ನನ್ನ ಕೂಗಿದಂತೆ..
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತಾ ನಾ ನಿಂತೆ..
ಮನಸಲ್ಲಿ ಅಂದ ಮಾತು ತಡವಾಗಿ ಕೇಳಿತೇನು..
ಗೊತ್ತಿಲ್ಲದೇ ನಾ ಗೀಚಲೆ ನಾ ಹೆಸರೊಂದನು.. ಅಳಿಸುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ..
ಪ್ರತಿಸಲ ಬಾಗಿಲ ಸದ್ದಿಗೆ ಎದೆಯ ವಿಸ್ಪಂದನ..
ತೆರೆದರೆ ಬೀಸುವ ಗಾಳಿಯೂ ಹೀಳಿದೇ ಸಾಂತ್ವಾನ..
ಓ... ನನ್ನ ವಿರಹವು ನಿನ್ನಿಂದ ಇನ್ನು ಚೆಂದ......
ವಿವರಿಸಲಾರೆಯೆಲ್ಲ ನಾ ದೂರದಿಂದ....
ನೆನಪನ್ನು ರಾಶಿಹಾಕಿ ಎಣಿಸುತ್ತಾ ಕೂರಲೇನು....
ಕನ್ನಡಿಯಲಿ ನಾ ಹುಡುಕಲೆ ನಗುವೊಂದನು.. ಉರಿಸುವ ಮುನ್ನವೇ..
ತನ್ಮಯಳಾದೇನು ತಿಳಿಯುವ ಮುನ್ನವೇ....
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ...

Wednesday 26 October 2011

ಶ್ರೀ ಮಂಜುನಾಥ


ಚಿತ್ರ : ಶ್ರೀ ಮಂಜುನಾಥ


ಆಕಾಶವೇ ಆಕಾರ......... ಭೂಮಿಯೇ ವಿಭೂತಿ........
ಅಗ್ನಿಯೇ ತ್ರೀನೇತ್ರ.......... ವಾಯುವೇ ಚಲನಾ........ಜಲವೇ ಜಗವಾಳೋ ಮಂದಹಾಸ...............
ಪಂಚಭೂತಗಳಿಂದಾದ ಪ್ರಪಂಚೇಶ್ವರಾ......ವಿಧಾತ ವಿಶ್ವನಾಥಾ......
ಭುವಿಯೊಳಗೆ ಆರಾಧಾನೆ ಶ್ರೀ ಮಂಜುನಾಥಾ...
ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ, ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ
ಅಮೄತಕ್ಕಾಗಿ ಕ್ಷೀರ ಸಾಗರ ಕಡೆಯೇ ಆವಿರ್ಭವಿಸಿತು ಹಾಲಾಹಲ....
ಶಂಕರನ ಶಂಖದೊಳು ಶುಭಕರ ತೀರ್ಥವಾಯಿತು ವಿಷಾ..
ಜೀವರಾಶಿಯ ರಕ್ಷಿಸೇ ಶಿವ ವಿಷಕಾದ ಅಂಕುಶ
ಓಂ ನಮಃ ಶಿವಾಯಾ..... ಓಂ ನಮಃ ಶಿವಾಯಾ.....
ಪೂರ್ವಜರಾತ್ಮಕೆ ಶಾಂತಿಯ ನೀಡಲು ಗಂಗೆಯ ಧರೆಗೆ ಕರೆತರಲು
ತಪಸ್ಸನು ಮಾಡಿದ ಭಗೀರಥಾ....
ಸುರಧಾರೆ, ವರಧಾರೆ, ಮಹಾಧಾರೆ, ಜಲಧಾರೆ,,,,
ಧುಮುಧುಮುಕಿ ಧರೆಗಿಳಿಯೇ ಧಾವಿಸಿದರೇ.....
ಅಲ್ಲೋಲ ಕಲ್ಲೋಲ ಭೂಮಿ ಕಾಪಾಡು ಬಾರಯ್ಯ ಸ್ವಾಮಿ..... 
ತಡೆಯಬಲ್ಲೇಯಾ ನೀನು ಈ ಗಂಗೆಯಾ?..
ಜಲಸಮಾಧಿಯು ನೀನು ಮೄತ್ಯುಂಜಯಾ..


ಹೇಗೆ ಪಡೆದೆ ಹರಿವ ಈ ಶಕ್ತೀಯಾ....
ಹೆಣ್ಣೇ ಅರಿವೆಯಾ ನೀನು ಶಿವ ನಿರ್ಣಯ
ತಡೆವೆಯಾ? ಕೈಲಾಸವಾಸ....
ಶಿವಶಿರವೇ ನಿನ್ನ ನಿವಾಸ......


ಪ್ರಿಯಾ ಗಂಗೆ ನಿನಗೇನು ಬೇಕು?
ನಿನ್ನ ಮುಡಿಯೇ ಅರಮನೆಯಾಗಬೇಕು...
ಆನಂದಾ.... ಆನಂದಾ.... ಶಿವಗಂಗೆ ಪ್ರೇಮಾನುಬಂಧಾ...
ಬಾರೇ ಶಿವಸಿರಚ್ಚಾರಿಣೀ...
ಧನ್ಯೋಸ್ಮಿ.... ಧನ್ಯೋಸ್ಮಿ.... ಸ್ವಾಮಿ
ಹರಾ... ವರಾ........ ಪಾಲಿಸು....
ಸದಾ... ಶಿವಾ.... ಪ್ರೀತಿಸು......
ಸಖೀ.... ಸಖೀ.... ಪಾರ್ವತಿ
ಪ್ರೀಯೇ... ಇದೇ.... ಸಮ್ಮತಿ
ಹೇ ಶಂಕರ ಶಾಂತಿಸು.. ಆ ಮನ್ಮಥನ ಬದುಕಿಸು.....
ಲೋಕಕಲ್ಯಾಣವನು ಕೋರಿ ಶಿವನು
ಪಾರ್ವತಿ ಪರಿಣಯಕೆ ವರನಾದನು
ಸತಿಗೆ ತನ್ನ ತನುವಲ್ಲಿ ಸಮಭಾಜ್ಯ ನೀಡುತಾ ಅರ್ಧನಾರೀಶ್ವರನಾದ
ನಾದ ಶಿವನು  ವೇದ ಶಿವನು  ನಾಟ್ಯ ಶಿವನು..........

ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ, ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ

Monday 24 October 2011

ಗಾಳಿಪಟ

ಚಿತ್ರ : ಗಾಳಿಪಟ 


ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ ಮಲೆಬಿಲ್ಲಿನಂತೆ ನೋವು
ಗುರಿಯಿರದ ಏಕಾಂತವೆ ಒಲವೆ...

ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ಹೊಂಗನಸ ಚಾದರದಲ್ಲಿ ಮುಳ್ಳಿನ ಹಾಸಿಗೆಯಲಿ ಮಲಗಿ
ಯಾತನೆಗೆ ಮುಗುಳ್ನಗು ಬರಲು ಕಣ್ಣಾ ಹನಿ ಸುಮ್ಮನೆ ಒಣಗಿ
ಅವಳನ್ನು ಜಪಿಸುವುದೇ ಒಲವೆ...

ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆಮೂರು ಸ್ವರದಾ ಹಾಡಿನಲಿ ಹೃದಯವನು ಹರಿಬಿಡಬಹುದೇ
ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ
ಬಿಕ್ಕಳಿಸುವಾ ಎದೆಯೊಳಗೆ ನಗುತಲಿದೆ ಮಡಿದ ಕವನ
ಒಂಟಿತನದ ಗುರುವೇ ಒಲವೆ....

ಕೃಷ್ಣಾ ನೀ ಬೇಗನೆ ಬಾರೋ


ಚಿತ್ರ : ಪ್ಯಾರಿಸ್ ಪ್ರಣಯ 



ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು 

ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು 
ವಾಸುದೇವ ವೇಣುಗೋಪ ಬಾ...........
ಕೃಷ್ಣ ಬಾ ನೀ ಬೇಗ ಬಾ.............

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
 ರಾಧೆಯ ಕೂಗುನೀ ಕೇಳಲಿಲ್ಲವೇನು 

ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು 
ವಾಸುದೇವ ವೇಣುಗೋಪ ಬಾ.......
ಕೃಷ್ಣ ಬಾ .....

ಆತ್ಮವು ನೀನೆ, ಜೀವವು ನೀನೆ, ನನ್ನೆದೆ ಹಾಡೇ ನೀನೆ,... ಹಾಡಿನ ಪ್ರಾಣವು ನೀನೆ....
ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ, ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು.......
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ..... ಬೇಗ ಬಾ.....ನೀ ಬೇಗ ಬಾ....

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ.....

ಜನನವು ನೀನೆ, ಮರಣವು ನೀನೆ, ನನ್ನೆದೆ ಧ್ಯಾನವು ನೀನೆ, ಧ್ಯಾನದ ಪ್ರಣತಿಯು ನಾನೇ.......
ಬೆಳಗುವೆ ದೀಪ, ತೋರಿಸೋ ರೂಪ, ಎಂದಿಗೆ ಬರುವೆಯೋ ನೀನು, ಎನ್ನುತ ಕಾಯುವೆ ನಾನು....
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ..... ಬೇಗ ಬಾ.....ನೀ ಬೇಗ ಬಾ....

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ

ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು 
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು 
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ...

Friday 21 October 2011

ಸಂಜು ಮತ್ತು ಗೀತ (Female version)


ಚಿತ್ರ : ಸಂಜು ವೆಡ್ಸ್ ಗೀತ 


ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಬರೆದಾಗಿದೆ  ಇಂದು  ಬ್ರಹ್ಮನು ..
ನನ್ನ  ಜೀವಕಿಂತ .. ನೀನೆ  ನನ್ನ  ಸ್ವಂತ ..
ಇರುವಾಗ  ನಾನು  ಚಿಂತೆ  ಏನು ..
ನಿನ್ನ  ಎಲ್ಲ  ನೋವನ್ನು .. ಕೊಡುಗೆ  ನೀಡು  ನನಗಿನ್ನೂ ..
ನನ್ನ  ಎಲ್ಲ  ಖುಷಿಯನ್ನು . ಕೊಡುವೆ  ನಿನ್ನ  ವಶಕಿನ್ನು ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಿನ್ನ ಸೇರುವೇ..ನಿನ್ನ ಸೇರುವೇ..ನನ್ನೋಲವೇ...


ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇಂದು  ಬ್ರಹ್ಮನು ..
ಕಂಡಿಲ್ಲಾ ಯಾರು...... ಆ ದೇವರನ್ನು.... ಇರಬಹುದು ಏನೋ ನಿನ್ನಂತೆ ಅವನು....
ಗೆಳೆಯ ಎಂದರೇ ಅದಕು ಹತ್ತಿರ... ಇನಿಯಾ ಎಂದರೇ ಅದಕು ಎತ್ತರ....
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು....
ಕರಗಿ ಹೋಗಲೇನು ನಿನ್ನ ಕರಗಳಲ್ಲೀ ನಾನು.....
ಯುಗದಾಚೆಗೂ ಜಗದಾಚೆಗೂ ಜೋತೆಗೆ ಸಾಗುವೇ....
ಕಡಲೆಲ್ಲವಾ ಅಲೆ ಸುತ್ತುವಾ ತರವೇ....
ನಿನ್ನ ಸೇರುವೇ..ನಿನ್ನ ಸೇರುವೇ..ನನ್ನೋಲವೇ.......

ಹಾಳಾದ ಸಂತೆ..... ನಡುವಲ್ಲಿ ನಿಂತೆ.... ಬಿಡಬೇಡ ನನ್ನ ಒಬ್ಬಂಟಿಯಂತೇ.........
ಭಯವಾಗಿದೆ ನನಗೆ ಈ ಕ್ಷಣ.... ಬಳಿ ಬರಬಾರದೇ ನೀನು ತಕ್ಷಣ.......
ಕೈಯ ಹಿಡಿದು ನನ್ನಾ...... ದೂರ ಕರೆದುಕೊಂಡು ಹೋಗು.....
ಕರುಣೆ ಬಾರದೇನು ಹೇಳು.... ನನ್ನ ಮೇಲೆ ನಿನಗು......
ನಿನ್ನ ನಂಬಿದ ನನ್ನ ಜೀವದ ಹೊಣೆಯು ನಿನ್ನದೇ....
ಮುಳುಗೊನಿಗೆ ಕೊನೆಯಾಸೆ ತರವೇ........
ಬರಬಾರದೇ  ಬರಬಾರದೇ ನನ್ನೋಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ....
ಬರೆದಾಗಿದೆ  ಇಂದು  ಬ್ರಹ್ಮನು ..,,,,,,,,,,,,,,,,,

Thursday 20 October 2011

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ

ಚಿತ್ರ : ಹುಡುಗರು 

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ 
ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದೆಯ 
ನಡುವೆಲ್ಲೋ ಮೆಲ್ಲಗೆ ಮಾಯವಾದೆಯ!!!

ನೀರಲ್ಲಿ  ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ !!!
ಇದ್ದಲ್ಲೇ ಆಲಿಸಬಲ್ಲೆ ನಿನ್ನೆಲ್ಲ ಪಿಸುಮಾತು ನನ್ನಲ್ಲಿ ನೀನಿರುವಾಗ ಇನ್ನೇಕೆ ರುಜುವಾತು ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ ಅಳಿಸಲಾರೆ ನಾನಿಂದು ಮನದ ಗೋಡೆ ಬರಹ ಸಹಿಯಾದ ಮೇಲೆ ಸಹ ಗೀತೆಯೊಂದು ಮರೆಯಾಯಿತೆಕೆ ನೋಡು ಇಲ್ಲೊಂದು ಸಾಲು ಅಲ್ಲೊಂದು ಸಾಲು ಬೇರೆತಾಗಲೇನೆ ಹಾಡು !!!
ನೀರಲ್ಲಿ  ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ !!!
ದಾರೀಲಿ ಹೂಗಿಡವೊಂದು ಕಟ್ಟಿಲ್ಲ ಹೂಮಳೆ ಕಣ್ಣಲ್ಲಿ ಕಣ್ಣಿಡು ನೀನು ಮತ್ತಿಲ್ಲ ಆಮೇಲೆ ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು ಕೇಳ ಬೇಡ ಇನ್ನೇನು ನೀನು ನನ್ನ ಕುರಿತು ಎದೆಯಾಳದಿಂದ ಮಧು ಮೌನವೊಂದು ಕರೆವಾಗ ಜಂಟಿಯಾಗಿ ಇಲ್ಲೊಂದು ಜೀವ ಅಲ್ಲೊಂದು ಜೀವ ಇರಬೇಕೆ ಒಂಟಿಯಾಗಿ !!!
ನೀರಲ್ಲಿ  ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ 
ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ !!!

ಕಸ್ತೂರಿ ನಿವಾಸ

ಚಿತ್ರ : ಕಸ್ತೂರಿ ನಿವಾಸ

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 
ಏನೇ  ಬರಲಿ  ಯಾರಿಗೂ  ಸೋತು  ತಲೆಯ  ಬಾಗದು 
ಎಂದಿಗೂ  ನಾನು  ಹೀಗೆ  ಇರುವೆ  ಎಂದು  ನಗುವುದು 
ಹೀಗೆ  ನಗುತಲಿರುವುದು.....

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು

ಗುಡಿಸಲೇ  ಆಗಲಿ  ಅರಮನೆ  ಆಗಲಿ  ಆಟ  ನಿಲ್ಲದು 
ಹಿರಿಯರೇ  ಇರಲಿ  ಕಿರಿಯರೆ  ಬರಲಿ  ಬೇದ ತೋರದು..
ಕಷ್ಟವೋ  ಸುಖವೋ  ಅಳುಕದೆ  ಆಡಿ  ತೂಗುತಿರುವುದು .. ತೂಗುತಿರುವುದು..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು

ಮಯ್ಯನೇ  ಹಿಂಡಿ ನೊಂದರು  ಕಬ್ಬು  ಸಿಹಿಯ  ಕೊಡುವುದು ..
ತೆಯುತಲಿದ್ದರು  ಗಂಧದ  ಪರಿಮಳ  ತುಂಬಿ  ಬರುವುದು .. 
ತಾನೆ  ಉರಿದರು  ದೀಪವು  ಮನೆಗೆ  ಬೆಳಕ  ತರುವುದು ..
ದೀಪ .. ಬೆಳಕ  ತರುವುದು ..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಆಡಿಸುವಾಥನ  ಕೈ  ಚಲಕದಲಿ  ಎಲ್ಲ  ಅಡಗಿದೆ 
ಆತನ  ಕರುಣೆಯೇ  ಜೀವವ  ತುಂಬಿ  ಕುಣಿಸಿ  ನಲಿಸಿದೆ 
ಆ  ಕೈ  ಸೋತರೆ  ಬೊಂಬೆಯ  ಕತೆಯು  ಕೊನೆಯಾಗುವುದೇ .. ಕೊನೆಯಾಗುವುದೇ ..

ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಏನೇ  ಬರಲಿ  ಯಾರಿಗೂ  ಸೋತು  ತಲೆಯ  ಬಾಗದು 
ಎಂದಿಗೂ  ನಾನು  ಹೀಗೆ  ಇರುವೆ  ಎಂದು  ನಗುವುದು 
ಹೀಗೆ  ನಗುತಲಿರುವುದು ..
ಆಡಿಸಿ  ನೋಡು  ಬೀಳಿಸಿ  ನೋಡು  ಉರುಳಿ  ಹೋಗದು 

ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..



ಚಿತ್ರ : ಸಂಜು ವೆಡ್ಸ್ ಗೀತ


ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಕಡಲು  ಕರೆದಂತೆ  ನದಿಯನು  ಭೇಟಿಗೆ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಮನ   ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ..
ಕಡಲು  ಕರೆದಂತೆ  ನದಿಯನು  ಭೇಟಿಗೆ..

ಜೀವನ ಈ  ಕ್ಷಣ ಶುರುವಾದಂತಿದೆ ..
ಕನಸಿನ  ಊರಿನ  ಕದ  ತೆರೆಯುತ್ತಿದೆ ..
ಅಳಬೇಕು  ಒಮ್ಮೆ  ಅಂತನಿಸಿದೆ  .. ಖುಷಿಯೀಗ   ಮೇರೆ  ಮೀರಿ ..
ಮಧುಮಾಸದಂತೆ  ಕೈಚಾಚಿದೆ .. ಹಸಿರಾಯ್ತು  ನನ್ನ  ದಾರಿ
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..

ಸಾವಿನ  ಅಂಚಿನ  ಬದುಕಂತಾದೆ   ನೀನು ..
ಸಾವಿರ ಸೂರ್ಯನ  ಬೆಳಕಂತಾದೆ  ನೀನು ..
ಕೊನೆಯಾಸೆ  ಒಂದೇ  ಈ  ಜೀವಕೆ  ನಿನ್ನ  ಕೂಡಿ  ಬಾಳಬೇಕು
ಪ್ರತಿ  ಜನ್ಮದಲ್ಲೂ  ನೀ  ಹೀಗೆಯೇ  ನನ್ನ  ಪ್ರೀತಿ  ಮಾಡಬೇಕು..
ನೀಡುವ  ಮುನ್ನ  ನಾನೇ  ಆಮಂತ್ರಣ ..
ಗಗನವೇ  ಬಾಗಿ  ಭುವಿಯನು  ಕೇಳಿದ  ಹಾಗೆ ..
ಕಡಲು  ಕರೆದಂತೆ  ನದಿಯನು  ಭೇಟಿಗೆ ..
ಯಾರು  ಬಂದಿರದ  ಮನಸಲಿ .. ನಿನ್ನ  ಆಗಾಮನ  ಈ  ದಿನ ..
ನೀಡುವ  ಮುನ್ನ  ನಾನೇ  ಆಮಂತ್ರಣ ..





ಗಗನವೇ ಬಾಗಿ....

ಸಂಜು ಮತ್ತು ಗೀತಾ


ಚಿತ್ರ : ಸಂಜು ವೆಡ್ಸ್ ಗೀತ 


ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಬರೆದಾಗಿದೆ  ಇಂದು  ಬ್ರಹ್ಮನು ..
ನನ್ನ  ಜೀವಕಿಂತ .. ನೀನೆ  ನನ್ನ  ಸ್ವಂತ ..
ಇರುವಾಗ  ನಾನು  ಚಿಂತೆ  ಏನು ..
ನಿನ್ನ  ಎಲ್ಲ  ನೋವನ್ನು .. ಕೊಡುಗೆ  ನೀಡು  ನನಗಿನ್ನೂ ..
ನನ್ನ  ಎಲ್ಲ  ಖುಷಿಯನ್ನು . ಕೊಡುವೆ  ನಿನ್ನ  ವಶಕಿನ್ನು ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇಂದು  ಬ್ರಹ್ಮನು ..

ಆ  ಕಣ್ಣಿಗೊಂದು  ಈ  ಕಣ್ಣಿಗೊಂದು .. ಸ್ವರ್ಗನ  ತಂದು  ಕೊಡಲೇನು  ಇಂದು
ಏನಾಗಲಿ  ನನ್ನ  ಸಂಗಾತಿ   ನೀ .. ನಿನ್ನ  ಎಎ   ಕಣ್ಣಲಿ  ಇದೆ  ಕೊನೆಯ  ಹನಿ
ಎದೆಯ  ಗೂಡಿನಲ್ಲಿ  ಪುಟ್ಟ  ಗುಬ್ಬಿಯಂತೆ  ನಿನ್ನ .. ಬೆಚ್ಚನೆಯ  ಪ್ರೀತಿ  ಕೊಟ್ಟು  ಬಚ್ಚಿ  ಇಡುವೇ  ಚಿನ್ನ
ಇತಿಹಾಸದ  ಪುಟ  ಕಾಣದ  ಒಲುಮೆ  ನೀಡುವೆ ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಗಬಾರದೇ .. ನಗಬಾರದೇ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇನ್ಧು  ಬ್ರಹ್ಮನು ..

ತಂಗಾಳಿಯಾಗೋ  ಬಿರುಗಾಳಿಯಾಗೋ  ನೀ  ಒಮ್ಮೆ  ಬಂದು  ನನ್ನ  ಸೋಕಿ  ಹೋಗು ..
ನಿನ್ನ  ನೋಡದೆ  ಅಳುವೇ  ಬರುತಿದೆ .. ನಿನ್ನ  ನಗುವಿಲ್ಲದೆ  ಜಗ  ನಿಂತಿದೆ ..
ನಿದಿರೆ  ಬರದ  ಕ
ಣಗೆ   .. ಬಾರೆ  ಹಗಲುಗನಸ  ಹಾಗೆ ..
ಬಳಲಿ  ಹೋದ  ನನಗೆ .. ಬಾರೆ  ಜೀವ  ತುಂಬೋ  ಹಾಗೆ ..
ಉಸಿರಾಡುವ  ಶವವಾದೆ  ನಾ , ನೀನು  ಇಲ್ಲದೆ ..
ಮಳೆ  ನಿಂತರು   ಮರದ  ಹನಿ  ತರವೇ ..
ಬಾ  ಇಲ್ಲಿಗೆ .. ನನ್ನಲ್ಲಿಗೆ .. ನನ್ನೊಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇಂದು ಬ್ರಹ್ಮನು ..

ಕುರಿ ಕೋಳೀನ


ಚಿತ್ರ : ಜೋಗಯ್ಯ 

ಕುರಿ ಕೋಳೀನ ಸೋಮ್ವಾರ ಶನಿವಾರ ಕೋಯ್ಯಂಗಿಲ್ಲ....... ಹಾಂ,,,, ಜೀ
ವಾರ ಒಪ್ಪತ್ತು ಇಲ್ದಾಂಗೆ ಪೂಜೇನು ಮಾಡಂಗಿಲ್ಲ....... ಹಾಂ,,,, ಜೀ
ಗಳಿಗೆ ನೋಡಿ ಪ್ರೀತಿ ಹುಟ್ಟಲ್ಲಾ..... ಕಾಲ ನೋಡಿ ತಾಯಿ ಹೆರಲ್ಲಾ.... ಜಾಗ ನೋಡಿ ಯಾರು ಸಾಯಲ್ಲಾ.....
ಹಂಗಂತಾ, ಹಿಂಗಂತಾ, ಎನೇನೋ ಹೇಳ್ತಾರಲ್ಲಾ................
ಹೋಗ್ಲೀ ಬಿಡು ಹಾಂ,,,, ಜೀ,   ಹೋಗ್ಲೀ ಬಿಡು ಹಾಂ,,,, ಜೀ,
ಹೋಗ್ಲೀ ಬಿಡುsssssssssss............
ಕುರಿ ಕೋಳೀನ ಸೋಮ್ವಾರ ಶನಿವಾರ ಕೋಯ್ಯಂಗಿಲ್ಲ....... ಹಾಂ,,ಜೀ! ಕ್ಯಾ,,ಜೀ!
ವಾರ ಒಪ್ಪತ್ತು ಇಲ್ದಾಂಗೆ ಪೂಜೇನು ಮಾಡಂಗಿಲ್ಲ....... ಹಾಂ,,,, ಜೀ
ಪಟ್ಟೆ ನಾಮದ ಬೆಕ್ಕನ್ನ ಅಡ್ದ ಬಂದ್ರೆ ನಿಲ್ಲಮ್ಮಾ.........
ಮುಂದಕ್ಕೋಗಬೇಡಮ್ಮಾ... ಜೋಪಾನಾ....ಅದು ಅಪಶಕುನಾ.....
ದೊಡ್ಡವರ ಮನೆ ಗುಡಾಣ... ಬಡವರ ಮನೆ ದವಸನಾ...
ಹಾದಿ ಬೀದೆ ಹೆಗ್ಗಣನಾ...... ಕಾಯೋದೆ ಬೆಕ್ಕು ಕಣಣ್ಣಾ......
ಹೋದ್ರೆ ಹೋಗ್ಲೀ ಬಿಟ್ಟಾಕು.. ಶಕುನನೆಲ್ಲಾ ಸುಟ್ಟಾಕು...
ಪ್ರೀತಿ ಮುಂದೆ ಯಾವ್ದು ನಿಲ್ಲಲ್ಲಾsssssssssss............
ಹೋಗ್ಲೀ ಬಿಡು ಹಾಂ,,,, ಜೀ,   ಹೋಗ್ಲೀ ಬಿಡು ಹಾಂ,,,, ಜೀ,
ಹೋಗ್ಲೀ ಬಿಡುsssssssssss............
ಮುಖ ಮೂತಿನು ತೊಳಿದೇನೆ ಹೊಲೆನು ಹಚ್ಹಂಗಿಲ್ಲಾ.....ಹಾಂ,,,, ಜೀ,
ನೈಟಿ ಹಾಂಕೊಂಡೆ ಗಂಡಂಗೇ ಕಾಫೀನೂ ಕೊಡಂಗಿಲ್ಲಾ....ಹಾಂ,,,, ಜೀ 
ಖಾಲಿ ಕೊಡ ತರಬೇಡ... ಸೌದೆ ಹೊತ್ತು ಬರಬೇಡ......
ಎಲ್ಲೀಗಂತ ಕೇಳ್ಬೇಡಾ.......... ಜೋಪಾನಾ... ಎಲ್ಲಾ ಅಪಶಕುನಾ.......
ಕೊಡದಲ್ ತಂದ್ರೆ ನೀರಣ್ಣಾ....... ಸೌದೆ ಹೊತ್ರೆ ಹಿಟ್ಟಣ್ಣಾ.......
ಎಲ್ಲೀಗಂತ ಕೇಳೋದು ಜೋಪಾನ್ವಾಗ್ ಹೋಗಿ ಬಾ ಅಂತ.....
ಏಳು ಮಲೈ ಮಾದಪ್ಪ..... ನೀನೇ ಹೇಳು ಬಾರಪ್ಪಾ....
ಒಂದು ತಿಳಿಯವಲ್ಲೋ ಶಿವಪ್ಪಾsssssssssss......
ಹೋಗ್ಲೀ ಬಿಡು ಹಾಂ,,,, ಜೀ,   ಹೋಗ್ಲೀ ಬಿಡು ಹಾಂ,,,, ಜೀ,
ಹೋಗ್ಲೀ ಬಿಡುsssssssssss...........
ಕುರಿ ಕೋಳೀನ ಸೋಮ್ವಾರ ಶನಿವಾರ ಕೋಯ್ಯಂಗಿಲ್ಲ....... ಹಾಂ,,,, ಜೀ
ವಾರ ಒಪ್ಪತ್ತು ಇಲ್ದಾಂಗೆ ಪೂಜೇನು ಮಾಡಂಗಿಲ್ಲ....... ಹಾಂ,,,, ಜೀ
ಗಳಿಗೆ ನೋಡಿ ಪ್ರೀತಿ ಹುಟ್ಟಲ್ಲಾ..... ಕಾಲ ನೋಡಿ ತಾಯಿ ಹೆರಲ್ಲಾ.... ಜಾಗ ನೋಡಿ ಯಾರು ಸಾಯಲ್ಲಾ.....
ಹಂಗಂತಾ, ಹಿಂಗಂತಾ, ಎನೇನೋ ಹೇಳ್ತಾರಲ್ಲಾ................
ಹೋಗ್ಲೀ ಬಿಡು ಹಾಂ,,,, ಜೀ,   ಹೋಗ್ಲೀ ಬಿಡು ಹಾಂ,,,, ಜೀ,
ಹೋಗ್ಲೀ ಬಿಡುsssssssssss............
ಕುರಿ ಕೋಳೀನಾsssssss,,,,,,,,,,,, ಹೋಗ್ಲೀ ಬಿಡ್ರೀss. 

Saturday 8 October 2011

ಪರವಶನಾದೆನು...

ಚಿತ್ರ : ಪರಮಾತ್ಮ


ಪರವಶನಾದೆನೂ... ಅರಿಯುವ ಮುನ್ನವೇ..
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ..?
ಇದಕ್ಕಿಂತ ಬೇಗ ಇನ್ನೂ.... ಸಿಗಬಾರದಿತ್ತೆ ನೀನು.....
ಇನ್ನಾದರೂ ಕೂಡಿಟ್ಟುಕೋ.. ನೀ ನನ್ನನೂ... ಕಳೆಯುವ ಮುನ್ನವೇ..


ಪರವಶನಾದೆನೂ ಅರಿಯುವ ಮುನ್ನವೇ...
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?

ನಿನ್ನ ಕಣ್ಣಿಗಂತು ನಾನು.. ನಿರುಪಯೋಗಿ ಈಗಲೂ...
ಇನ್ನು ಬೇರೆ ಏನು ಬೇಕು.. ಪ್ರೇಮಯೋಗಿಯಾಗಲೂ..
ಹೂ.... ಅರಳುವ ಸದ್ದನೂ.. ನಿನ್ನ ನಗೆಯಲ್ಲಿ ಕೇಳ ಬಲ್ಲೆ..
ನನ್ನ... ಏಕಾಂತವನ್ನು.. ತಿದ್ದಿ ಕೊಡು ನೀನೀಗ ನಿಂತಲ್ಲೆ..
ನಾನೇನೆ ಅಂದರೂನು.. ನನಗಿಂತ ಚೂಟಿ ನೀನು..
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ...
ಕದಿಯುವ ಮುನ್ನವೇ...?


ಪರವಶನಾದೆನೂ ಅರಿಯುವ ಮುನ್ನವೇ..
ಪರಿಚಿತನಾಗಲೀ.. ಹೇಗೆ ಪ್ರಣಯಕೂ ಮುನ್ನವೇ..?

ಕನಸಲಿ ತುಂಬ ಕೆಟ್ಟಿರುವೆನು.. ನಿನ್ನನು ಕೇಳದೆ..
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ...
ನನ್ನ ಕೌತುಕಾ ಒಂದೊಂದೆ ಹೇಳಬೇಕು..
ಆಲಿಸುವಾಗ ನೋಡು ನನ್ನನ್ನೆ ಸಾಕು..
ಸಹವಾಸ ದೋಷದಿಂದ.. ಸರಿಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೋ.. ಹಠವೊಂದನೂ...ಕೆಣಕುವ ಮುನ್ನವೇ.......


ಪರವಶನಾದೆನೂ.. ಅರಿಯುವ ಮುನ್ನವೇ...
ಪರಿಚಿತನಾಗಲೀ ಹೇಗೆ ಪ್ರಣಯಕೂ ಮುನ್ನವೇ...?

ಒಬ್ಬ ಪರಮಾತ್ಮ..

ಚಿತ್ರ : ಪರಮಾತ್ಮ 

ಕಾಲೇಜ್ ಗೇಟಲ್ಲಿ ಫೇಲಾಗಿ ಬಂದವರ ಕಾಪಾಡೋ.. ಚೊಂಬೇಶ್ವರ..
ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡಾಗಿ ಕಾಣುವುದು.. ಏನ್ ಮಾಡ್ಲಿ.. ಮಾಡ್ಲಿ... ಚೊಂಬೇಶ್ವರ..

ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ..
ಉಸಿರಾಡು ಆಡು ಆಡು ಆಡು ಅಂತಾನೆ..
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ..
ಪಾಸಾಗು ಆಗು ಆಗು ಆಗು ಅಂತಾನೆ..

ಫೇಲ್ ಆಗಾದವರುಂಟೆ ಚೊಂಬೇಶ್ವರ..
ಪಾಸಾಗಿ ಏನ್ ಮಾಡ್ಲಿ ಒಂದೇ ಸಲ..

ಒಂದು ಒಂದ್ಲಾ ಒಂದು.. ಎರಡ್ ಎರಡ್ಲಾ ಎರ್ಡು..
ಮೂರ್ ಮೂರ್ಲಾ ಮೂರು... ಬೈ ಹಾರ್ಟು ಮಾಡು..
ಓ ಮೈ ಗಾಡ್ಜಿಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಷನ್..

ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ..
ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸು..
ಮ್ಯೂಸಿಕ್ಕೆ ಸರಿಯಿಲ್ಲ ಏಳೇ ಸ್ವರ..
ಇನ್ನೆಷ್ಟು ಕೂಗೋದು ಎಮ್ಮೆ ತರ..
ಟ್ರೈ ಮಾಡು ಏನಾದ್ರೂ ಬ್ಯಾರೆ ತರ..
ಸೈಕಲ್ಲಿನಲಿ ಏರು ತೆಂಗಿನ್ ಮರ..

ಕೆ ರಾಮ.. ಪಿಯುಸಿಯಲ್ಲಿ ಒಮ್ಮೆ ಡುಮ್ಕಿ..
ಆಮೇಲೆ ಡಿಗ್ರೀಲಿ ಮೂರ್ ಮೂರೂ ಬಾಕಿ..
ಎಕ್ಸಾಮ್ ಹಾಲಿನಲ್ಲಿ ನನ್ನ ಪರಮಾತ್ಮ..
ಮಾರ್ನಿಂಗು ಶೋಗೆ ಹೋಗು ಕಂದ ಅಂತಾನೆ..
ಕ್ಲಾಸಲ್ಲಿ ನಾನು ಓಬ್ನೆ ಒಳ್ಳೇ ಪುಣ್ಯಾತ್ಮ..
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ
ಸಬ್ಜೆಕ್ಟೇ ಸರಿ ಇಲ್ಲ ಚೊಂಬೇಶ್ವರ..
ಸಿಲಬಸ್ಸು ಇರ್ಬಾರ್‍ದ ಸಿನಿಮಾ ತರ..

ಓದ್ಕೊಂಡು.. ಓದ್ಕೊಂಡು.. ಓದ್ಕೊಂಡಿರು ಡೌಟಿದ್ರೆ ಹುಡ್ಗಿರ್ರ್‌ನ ಕೇಳು ಗುರು..
ಇಲ್ಲಿಂದ ಹೋಗ್ತಾರ ಯಾರಾದರೂ... ಕಾಲೇಜು ಟೆಂಪಲ್ಲು ಇಲ್ಲೇ ಇರು...
ಕಾಲೊಂದು ಭಗವಂತ ಹಾಕಿರುವ ಟೋಪಿ..
ಇಲ್ಲಿಂದ ಪಾಸಾಗಿ ಹೋದವರೇ ಪಾಪಿ..
ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ..
ಕುರುಕ್ಷೇತ್ರದಲ್ಲಿ ಡ್ರೈವರ್ ಆಗಿ ಇರ್ಲಿಲ್ವೆ..
ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ..
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ..
ಸಿಸ್ಟೆಮ್ಮೆ.. ಸರಿ ಇಲ್ಲ ಚೊಂಬೇಶ್ವರ.. ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ..

ಕಾಲೇಜು.. ಸಾಸ್ವತ....