Saturday 8 October 2011

ಪರಮಾತ್ಮ

ಚಿತ್ರ : ಪರಮಾತ್ಮ 


ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ...

ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೋರಂಟಿ..
ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೆ ಗ್ಯಾರಂಟಿ..
ಒಬ್ಳಳನ್ನೇ ಲವ್ ಮಾಡಿ ಚೆನ್ನಾಗಿರಿ..
ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..

ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ...
ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...

ಹುಡುಗೀರ ಮನಸಲ್ಲಿ ಏನೇನಿದೆ..
ತಿಳ್ಕೊಳ್ಳೊ ತಾಕತ್ತು ನಮಗೆಲ್ಲಿದೆ..
ಪ್ರಾಬ್ಲೆಮ್ಮೆ ಇರದ.. ಫೀಮೇಲು ಇಲ್ಲ..

ಸಿಕ್ಸರ್ರು ಹೊಡಿಬಹುದು ಬ್ಯಾಟ್ ಇಲ್ಲದೆ..
ಪ್ರೀತ್ಸೋಕೆ ಆಗೋಲ್ಲ ಡೌಟಿಲ್ಲದೆ..
ಅನುಮಾನ ಇರದ.. ಅನುರಾಗ ಇಲ್ಲ...

ಮಾಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ..
ಸೆಲ್ ಪೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ..
ಲವ್ವಲ್ಲಿ ಕಣ್ಣೀರು ಕಂಪಲ್ಸರಿ..
ಯಾವ್ದುಕ್ಕೂ ಕರ್ಚೀಫು ಇಟ್ಕೊಂಡಿರಿ..

ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...
ಅತ್ಲಾಗೆ ಆ ಹುಡುಗಿ ಇತ್ಲಾಗೆ ಈ ಹುಡುಗಿ ಯಾವತ್ತು ಇರಬಾರ್ದು ರೀ...

ಯಾರಾನ ಕೈ ಕೊಟ್ರೆ ಪಾರ್ಟಿ ಕೊಡಿ..
ನೆನಪೆಲ್ಲ ಸೋಪ್ ಹಾಕಿ ತೊಳ್ಕೊಂಡು ಬಿಡಿ..
ಕಣ್ಣಲ್ಲಿ ಸೋಪು ಹೋಗ್ಬಾರ್ದು ಕಣ್ರೀ..

ಟೈಮ್ ಇದ್ರೆ ಒಂದ್ಚೂರು ದುಖಾಪಡಿ..
ಮೆಸ್ಸೇಜು ಬರಬಹುದು ಕಾಯ್ತಾ ಇರಿ..
ಹೃದಯಕ್ಕೆ ಗ್ಯಾಪು.. ಕೊಡಬಾರ್ದು ಕಣ್ರೀ..

ಬೆನ್ನಲ್ಲಿ ಹುಣ್ಣಂತೆ ಆ ಫಸ್ಟ್ ಲವ್ವು..
ಯಾಮಾರಿ ಅಂಗಾತ ಮಲ್ಕೊಂಡ್ರೆ ನೋವು..
ಎಲ್ಲಾನೂ ಮರೆಯೋಕೆ ಹೋಗ್ಬಾರ್ದು ರೀ..
ಕೆರೆಯೋಕೆ ಹುಣ್ಣೊಂದು ಇರಬೇಕು ರೀ..

ಕತ್ಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...
ಬಾಕಿ ಸಮಾಚಾರು ಬ್ರೇಕ್ ಕೇ ಬಾದ್ ಅಂತೀನಿ ನನ್ನನ್ನು ನಂಬ್ಕೊಂಡಿರೀ..

No comments:

Post a Comment