Friday, 21 October 2011

ಸಂಜು ಮತ್ತು ಗೀತ (Female version)


ಚಿತ್ರ : ಸಂಜು ವೆಡ್ಸ್ ಗೀತ 


ಸಂಜು  ಮತ್ತು  ಗೀತ  ಸೇರಬೇಕು  ಅಂತ..
ಬರೆದಾಗಿದೆ  ಇಂದು  ಬ್ರಹ್ಮನು ..
ನನ್ನ  ಜೀವಕಿಂತ .. ನೀನೆ  ನನ್ನ  ಸ್ವಂತ ..
ಇರುವಾಗ  ನಾನು  ಚಿಂತೆ  ಏನು ..
ನಿನ್ನ  ಎಲ್ಲ  ನೋವನ್ನು .. ಕೊಡುಗೆ  ನೀಡು  ನನಗಿನ್ನೂ ..
ನನ್ನ  ಎಲ್ಲ  ಖುಷಿಯನ್ನು . ಕೊಡುವೆ  ನಿನ್ನ  ವಶಕಿನ್ನು ..
ಮಳೆಯ  ಹನಿ  ಉರುಳೋ  ದನಿ  ತರವೇ ..
ನಿನ್ನ ಸೇರುವೇ..ನಿನ್ನ ಸೇರುವೇ..ನನ್ನೋಲವೇ...


ಸಂಜು  ಮತ್ತು  ಗೀತ  ಸೇರಬೇಕು  ಅಂತ ..
ಬರೆದಾಗಿದೆ  ಇಂದು  ಬ್ರಹ್ಮನು ..
ಕಂಡಿಲ್ಲಾ ಯಾರು...... ಆ ದೇವರನ್ನು.... ಇರಬಹುದು ಏನೋ ನಿನ್ನಂತೆ ಅವನು....
ಗೆಳೆಯ ಎಂದರೇ ಅದಕು ಹತ್ತಿರ... ಇನಿಯಾ ಎಂದರೇ ಅದಕು ಎತ್ತರ....
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು....
ಕರಗಿ ಹೋಗಲೇನು ನಿನ್ನ ಕರಗಳಲ್ಲೀ ನಾನು.....
ಯುಗದಾಚೆಗೂ ಜಗದಾಚೆಗೂ ಜೋತೆಗೆ ಸಾಗುವೇ....
ಕಡಲೆಲ್ಲವಾ ಅಲೆ ಸುತ್ತುವಾ ತರವೇ....
ನಿನ್ನ ಸೇರುವೇ..ನಿನ್ನ ಸೇರುವೇ..ನನ್ನೋಲವೇ.......

ಹಾಳಾದ ಸಂತೆ..... ನಡುವಲ್ಲಿ ನಿಂತೆ.... ಬಿಡಬೇಡ ನನ್ನ ಒಬ್ಬಂಟಿಯಂತೇ.........
ಭಯವಾಗಿದೆ ನನಗೆ ಈ ಕ್ಷಣ.... ಬಳಿ ಬರಬಾರದೇ ನೀನು ತಕ್ಷಣ.......
ಕೈಯ ಹಿಡಿದು ನನ್ನಾ...... ದೂರ ಕರೆದುಕೊಂಡು ಹೋಗು.....
ಕರುಣೆ ಬಾರದೇನು ಹೇಳು.... ನನ್ನ ಮೇಲೆ ನಿನಗು......
ನಿನ್ನ ನಂಬಿದ ನನ್ನ ಜೀವದ ಹೊಣೆಯು ನಿನ್ನದೇ....
ಮುಳುಗೊನಿಗೆ ಕೊನೆಯಾಸೆ ತರವೇ........
ಬರಬಾರದೇ  ಬರಬಾರದೇ ನನ್ನೋಲವೆ ..
ಸಂಜು  ಮತ್ತು  ಗೀತ  ಸೇರಬೇಕು  ಅಂತ....
ಬರೆದಾಗಿದೆ  ಇಂದು  ಬ್ರಹ್ಮನು ..,,,,,,,,,,,,,,,,,

1 comment: