Wednesday 26 October 2011

ಶ್ರೀ ಮಂಜುನಾಥ


ಚಿತ್ರ : ಶ್ರೀ ಮಂಜುನಾಥ


ಆಕಾಶವೇ ಆಕಾರ......... ಭೂಮಿಯೇ ವಿಭೂತಿ........
ಅಗ್ನಿಯೇ ತ್ರೀನೇತ್ರ.......... ವಾಯುವೇ ಚಲನಾ........ಜಲವೇ ಜಗವಾಳೋ ಮಂದಹಾಸ...............
ಪಂಚಭೂತಗಳಿಂದಾದ ಪ್ರಪಂಚೇಶ್ವರಾ......ವಿಧಾತ ವಿಶ್ವನಾಥಾ......
ಭುವಿಯೊಳಗೆ ಆರಾಧಾನೆ ಶ್ರೀ ಮಂಜುನಾಥಾ...
ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ, ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ
ಅಮೄತಕ್ಕಾಗಿ ಕ್ಷೀರ ಸಾಗರ ಕಡೆಯೇ ಆವಿರ್ಭವಿಸಿತು ಹಾಲಾಹಲ....
ಶಂಕರನ ಶಂಖದೊಳು ಶುಭಕರ ತೀರ್ಥವಾಯಿತು ವಿಷಾ..
ಜೀವರಾಶಿಯ ರಕ್ಷಿಸೇ ಶಿವ ವಿಷಕಾದ ಅಂಕುಶ
ಓಂ ನಮಃ ಶಿವಾಯಾ..... ಓಂ ನಮಃ ಶಿವಾಯಾ.....
ಪೂರ್ವಜರಾತ್ಮಕೆ ಶಾಂತಿಯ ನೀಡಲು ಗಂಗೆಯ ಧರೆಗೆ ಕರೆತರಲು
ತಪಸ್ಸನು ಮಾಡಿದ ಭಗೀರಥಾ....
ಸುರಧಾರೆ, ವರಧಾರೆ, ಮಹಾಧಾರೆ, ಜಲಧಾರೆ,,,,
ಧುಮುಧುಮುಕಿ ಧರೆಗಿಳಿಯೇ ಧಾವಿಸಿದರೇ.....
ಅಲ್ಲೋಲ ಕಲ್ಲೋಲ ಭೂಮಿ ಕಾಪಾಡು ಬಾರಯ್ಯ ಸ್ವಾಮಿ..... 
ತಡೆಯಬಲ್ಲೇಯಾ ನೀನು ಈ ಗಂಗೆಯಾ?..
ಜಲಸಮಾಧಿಯು ನೀನು ಮೄತ್ಯುಂಜಯಾ..


ಹೇಗೆ ಪಡೆದೆ ಹರಿವ ಈ ಶಕ್ತೀಯಾ....
ಹೆಣ್ಣೇ ಅರಿವೆಯಾ ನೀನು ಶಿವ ನಿರ್ಣಯ
ತಡೆವೆಯಾ? ಕೈಲಾಸವಾಸ....
ಶಿವಶಿರವೇ ನಿನ್ನ ನಿವಾಸ......


ಪ್ರಿಯಾ ಗಂಗೆ ನಿನಗೇನು ಬೇಕು?
ನಿನ್ನ ಮುಡಿಯೇ ಅರಮನೆಯಾಗಬೇಕು...
ಆನಂದಾ.... ಆನಂದಾ.... ಶಿವಗಂಗೆ ಪ್ರೇಮಾನುಬಂಧಾ...
ಬಾರೇ ಶಿವಸಿರಚ್ಚಾರಿಣೀ...
ಧನ್ಯೋಸ್ಮಿ.... ಧನ್ಯೋಸ್ಮಿ.... ಸ್ವಾಮಿ
ಹರಾ... ವರಾ........ ಪಾಲಿಸು....
ಸದಾ... ಶಿವಾ.... ಪ್ರೀತಿಸು......
ಸಖೀ.... ಸಖೀ.... ಪಾರ್ವತಿ
ಪ್ರೀಯೇ... ಇದೇ.... ಸಮ್ಮತಿ
ಹೇ ಶಂಕರ ಶಾಂತಿಸು.. ಆ ಮನ್ಮಥನ ಬದುಕಿಸು.....
ಲೋಕಕಲ್ಯಾಣವನು ಕೋರಿ ಶಿವನು
ಪಾರ್ವತಿ ಪರಿಣಯಕೆ ವರನಾದನು
ಸತಿಗೆ ತನ್ನ ತನುವಲ್ಲಿ ಸಮಭಾಜ್ಯ ನೀಡುತಾ ಅರ್ಧನಾರೀಶ್ವರನಾದ
ನಾದ ಶಿವನು  ವೇದ ಶಿವನು  ನಾಟ್ಯ ಶಿವನು..........

ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಶ್ರೀ ಮಂಜುನಾಥನ ಚರಿತೆ ಮಧುರ ಮಧುರ ಮಹಾನಂದ ಶಿಖರ
ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ, ಮಂಜುನಾಥ ಚರಿತೆ, ಶ್ರೀ ಮಂಜುನಾಥ ಚರಿತೆ

No comments:

Post a Comment