Monday 27 February 2012

ಸರಿಗಮ

ಚಿತ್ರ : ಹೂ 


ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ....
ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ....
ಕಣ್ಣಾಗಿ ಕಾಡುವೆ.. ಹೃದಯದಿ ಹಾಡುವೆ...
ಜೊತೆಯಾಗಿ ಹುಟ್ಟಲಿಲ್ಲ ನನಗಂತೂ ನೀನೆ ಎಲ್ಲಾ..
ಮಾಯಾಗಾರ ಸೃಷ್ಟಿಯಲ್ಲಿ ಹೂಗಾರ ನೀನೆ ಇಲ್ಲಿ.....


ಕಣ್ಣಲಿ ಕಣ್ಣಾಗಿ, ಮಣ್ಣಲಿ ಮಣ್ಣಾಗಿ, ನೆರಳಾಗಿ ನಾ ಕಾಯುವೇ..
ಅರಳಿದ ಹೂವಾಗಿ ಮನದಲಿ ನೀನು ಮುಡಿಯಲು ಹೂವೇತಕೆ...
ನನ್ನ ನಿನ್ನ ಆಸೆಯು ಒಂದೇ ಜೊತೆ ಜೊತೆ ಸಾಗುವ ಮುಂದೆ...
ನೀನೆ ನನ್ನ ಕನ್ನಡಿಯಂತೆ ಕಣ್ಣಾ ಮುಚ್ಚಿ ಮರೆವ ಚಿಂತೆ....
ಮಡಿಲಲ್ಲಿ ತೂಗದೆ ತಾಯಾಗಿ ಕೂಸಿಗೆ ||ಸರಿಗಮ||


ನಕ್ಕರೆ ಪನ್ನೀರು ಅತ್ತರೆ ಕಣ್ಣೀರು ನಾನಾಗಿ ಬೆರೆತೋಗುವೆ
ಮುಂಗಾರೇ ಬರಲಿ ಹಿಂಗಾರು ಇರಲಿ ಸೂರಾಗಿ ನಾ ಕಾಯುವೇ....
ನಿನ್ನ ನುಡಿ ಮಂತ್ರದ ಹಾಗೇ, ನಗು ಪುಣ್ಯ ಕ್ಷೇತ್ರದ ಹಾಗೇ..
ಆಸೆ ಭಾಷೆ ಎಲ್ಲವು ನೀನೇ, ಹಾವ ಭಾವ ಎಲ್ಲವು ನೀನೇ..
ಹೆಗಲಲ್ಲಿ ಹೊರದನೆಯೇ ತಂದೆಯೇ ನೀ ಕೂಸಿಗೆ ||ಸರಿಗಮ||





ಮನಸು ರಂಗಾಗಿದೆ ಇಂದು

ಚಿತ್ರ : ಸ್ಲಂ ಬಾಲ 


ಮನಸು ರಂಗಾಗಿದೆ ಇಂದು, ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ, ಏನೋ ಆವೇಗ....
ಬದುಕು ಇಂಪಾಗಿದೆ ಇಂದು, ಚೆಲುವ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ, ಏನೋ ಆವೇಗ.....
ಏನೋ ಮಾಟ, ಏನೋ ಮೋಡಿ, ಬರುವುದೆಲ್ಲ ಬಂದೆ ಬಿಡಲಿ
ಗಗನದಾಚೆ ಬಯಲ ತುದಿಗೂ ಲಗ್ಗೆ ಇಡುವಾ.....
ಯಾವುದೋ ವೇಗ, ಏನೋ ಆವೇಗ..............


ಹೂವಂಥ ನಗೆ ಮಲ್ಲಿಗೆ ಮುಡಿದವಳೇ... ನಾ ಕೊಡುವೆ ಕಾಲೊಂದಿಗೆ
ನೀ ಕೊಟ್ಟ ಕಾಲೊಂದಿಗೆ, ನನ್ನೊಳಗೆ ಕನಸುಗಳ ಕಣ್ತುಂಬಿದೆ..
ಕತ್ತಲೆಯ ತೊಳೆದಂತೆ, ಬೆಳಕು ನೀ ಬಾಳಿಗೆ
ಈ ನಿನ್ನ ಕಲ್ಪನೆಗೆ, ತಾರೆಗಳ್ ಹೊದಿಸಿ ಲಾಲಿಯ ನಾ ಹಾಡುವೆ
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ ||ಮನಸು||


ನಿನ್ನೆದೆಯ ನಾ ಅಪ್ಪಲು, ಈ ಹೃದಯ ನವಿಲಂತೆ ಕುಣಿದಾಡಿತು
ಈ ಮಾತ ನೀ ಹೇಳಲು, ತುಟಿಯ ಸನಿಹ ಬರುವಾಸೆ ನನಗಾಯಿತು
ನೆರಳಾಗಿ ನಾನಿರುವೆ, ಜೊತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ ನೂರೆಂಟು ನೆನಪಿನ ಬುತ್ತಿಯ ಕಟ್ಟೋಣ ಬಾ......
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ ||ಮನಸು||