Monday 27 February 2012

ಸರಿಗಮ

ಚಿತ್ರ : ಹೂ 


ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ....
ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ....
ಕಣ್ಣಾಗಿ ಕಾಡುವೆ.. ಹೃದಯದಿ ಹಾಡುವೆ...
ಜೊತೆಯಾಗಿ ಹುಟ್ಟಲಿಲ್ಲ ನನಗಂತೂ ನೀನೆ ಎಲ್ಲಾ..
ಮಾಯಾಗಾರ ಸೃಷ್ಟಿಯಲ್ಲಿ ಹೂಗಾರ ನೀನೆ ಇಲ್ಲಿ.....


ಕಣ್ಣಲಿ ಕಣ್ಣಾಗಿ, ಮಣ್ಣಲಿ ಮಣ್ಣಾಗಿ, ನೆರಳಾಗಿ ನಾ ಕಾಯುವೇ..
ಅರಳಿದ ಹೂವಾಗಿ ಮನದಲಿ ನೀನು ಮುಡಿಯಲು ಹೂವೇತಕೆ...
ನನ್ನ ನಿನ್ನ ಆಸೆಯು ಒಂದೇ ಜೊತೆ ಜೊತೆ ಸಾಗುವ ಮುಂದೆ...
ನೀನೆ ನನ್ನ ಕನ್ನಡಿಯಂತೆ ಕಣ್ಣಾ ಮುಚ್ಚಿ ಮರೆವ ಚಿಂತೆ....
ಮಡಿಲಲ್ಲಿ ತೂಗದೆ ತಾಯಾಗಿ ಕೂಸಿಗೆ ||ಸರಿಗಮ||


ನಕ್ಕರೆ ಪನ್ನೀರು ಅತ್ತರೆ ಕಣ್ಣೀರು ನಾನಾಗಿ ಬೆರೆತೋಗುವೆ
ಮುಂಗಾರೇ ಬರಲಿ ಹಿಂಗಾರು ಇರಲಿ ಸೂರಾಗಿ ನಾ ಕಾಯುವೇ....
ನಿನ್ನ ನುಡಿ ಮಂತ್ರದ ಹಾಗೇ, ನಗು ಪುಣ್ಯ ಕ್ಷೇತ್ರದ ಹಾಗೇ..
ಆಸೆ ಭಾಷೆ ಎಲ್ಲವು ನೀನೇ, ಹಾವ ಭಾವ ಎಲ್ಲವು ನೀನೇ..
ಹೆಗಲಲ್ಲಿ ಹೊರದನೆಯೇ ತಂದೆಯೇ ನೀ ಕೂಸಿಗೆ ||ಸರಿಗಮ||





No comments:

Post a Comment