ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...
ಒಲವಿಲ್ಲದ ಒಡಲೆಲ್ಲಿದೆ, ತಾಯಿಲ್ಲದ ಮಡಿಲೆಲ್ಲಿದೆ.
ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ...
ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ....
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...
ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ,
ಕಳೆದು ಹೋಗೋ ಮುನ್ನ ಕೈ ಸೇರಬಾರದೆ...
ಮಾತಿಲ್ಲದೆ ಕುಂತಿದ್ದ ಆ ಮೌನದ ಮನವಿಯ ಏನೆಂದು ನೀನೊಮ್ಮೆ ಕೇಳಬಾರದೆ...
ಹಳೆದಾದ ಹೊಸ ನೋವು ದಿನ ಕಳೆಯಲು ಗೊತ್ತಿಲ್ಲ, ಎದೆ ಗೂಡ ಗಡಿಯಾರ ನಿನ್ನಿಲ್ಲದೆ ನಡೆಯಲ್ಲ...
ಚೂರಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪು ಇದೆ... ಹಣೆ ಮುಟ್ಟಿದ ತಪ್ಪಿಗೆ ಶಿಕ್ಷೆಯ ಬೇಡುತಿದೆ...
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...
ಎದೆ ಮೇಲೆ ಮಾಡಿದ್ದ ಆ ಹಣೆಗೂ ಭಾಷೆಗೂ ಬಲವಿದ್ದರೆ ಒಲವನ್ನು ಕಾಯಬಾರದೆ...
ಉಸಿರೋಗೋ ಮುಂಚೆನೇ ಹೃದಯಕ್ಕೆ ತಾಯಾಗಿ ಬಡಿತಗಳ ಕೈ ತುತ್ತ ನೀಡಬಾರದೆ...
ಹೆಸರನ್ನು ಬರೆದಿಟ್ಟ ಗೋಡೆಗೂ ಉಸಿರಿಲ್ಲ..
ಮನಸ್ಸಾರೆ ಅಳಿಸೋಕೆ ಇದು ಗೊಂಬೆಯ ಕನಸಲ್ಲ.....
ದೂರಾದರೆ ನೋವಾಗದೇ.... ದೂರಾಗಲು ಭಯವಾಗಿದೆ.. ನಿನ್ನೊಟ್ಟಿಗೆ ಕಳೆದ ನೆನಪೇ ಕಾಡುತ್ತಿದೆ...
ನನ್ನ ಕನಸಿನ ಪೆಟ್ಟಿಗೆಗೆ ಬೀಗವು ಬೀಳುತ್ತಿದೆ...
ಮುಸ್ಸಂಜೆ ವೇಳೆಲಿ ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ....
ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ...
ಮಧುರವಾದ ಭಾವಲಹರಿ.
ReplyDeleteHello Supreetha
ReplyDeleteIf you are in Bangalore, you can get my novel in major book shops. My books are also available in Mysore, Mangalore. You can write to Sapna Book house bangalore and ask them to courier the book to you. If at all you are not able to get the book, please write to me at sudhesh.shetty@gmail.com and I can have it sent to you.
Regards
Sudesh
Ok, thank you
Deleteನನಗೆ ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಎಂದರೆ ಬಹಳ ಇಷ್ಟ ಅವರ ಎಲ್ಲಾ ಚಿತ್ರಗಳು ನೋಡುತ್ತಿರುತ್ತೇನೆ ಹಾಗೂ ಹಾಡುಗಳನ್ನು ಕೇಳುತಿರುತ್ತೇನೆ ಮತ್ತು ನನಗೆ ರಾಜ ಮಹಾರಾಜರುಗಳ ಇತಿಹಾಸ ಶಿಲ್ಪಕಲೆ ಪುರಾತನ ದೇವಾಲಯಗಳ ವೀಕ್ಷಣೆ ಇವೆಲ್ಲವೂ ನನಗೆ ಇಷ್ಟ
ReplyDelete