Monday 18 February 2013

ಹಣ್ಣೆಲೆ ಚಿಗುರಿದಾಗ

ಹೂವು ಚೆಲುವೆಲ್ಲ ನಂದೆಂದಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ||

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆoದಿತು

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆoದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆoದಿತು

1 comment:

  1. ಸುಂದರವಾದ ಗೀತೆಯನ್ನು ಮತ್ತೆ ನೆನಪಿಗೆ ತಂದುಕೊಟ್ಟಿರುವಿರಿ. ಧನ್ಯವಾದಗಳು.

    ReplyDelete