Friday 30 March 2012

ನಾ ಕಾಣೋ ಲೋಕವನ್ನು

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ
ಮೆಲ್ಲನೆ ಹೇಳು ಓ ಮಲ್ಲಿಗೆಯೇ
ನಮ್ಮಾ ಕಾಯೋ ಭೂಮೀತಾಯೆ
ನಿನ್ನ ನೋಡಲೂ ನನಗೆ ಇನ್ನೊಂದು ಜನ್ಮವೂ ಬೇಕು
ಬಾನಾಡಿಯಾ ಹಾಗೆ ನಾ ಹಾಡಿ ಬದುಕಿರಲುಬೇಕು
|| ನಾ ಕಾಣೋ ಲೋಕವನ್ನು ||


ಅರಳಿದ ಹೂಗಳ ನೋಡದೆ ಇದ್ದರೂ... ಆ ನಗೆ ನಾನರಿವೆ....
ಹರಿಯುವ ನದಿಗಳ ಕಾಣದೆ ಇದ್ದರೂ... ಸ್ಪರ್ಶದಿ ನಾ ತಿಳಿವೆ....
ಕುಹು ಕುಹು ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾನಿರುವೆ...
ಕಲ್ಪನೆ ಲೋಕದ ಬೆನ್ನನ್ನು ಏರೀ.. ರೆಕ್ಕೆಯ ನಾ ಪಡೆವೆ...
ನೋವಿಲ್ಲಾ ನಿಮ್ಮನು ನಾ.., ನೋಡದೆ ಇದ್ದರೂ...
ನೀವು ನನ್ನಾ ನೋಡಿದರೇ..., ಸಾಕಲ್ಲವೇ ಅದು...
ನಿಮ್ಮಾ ಮುಂದೇ... ಗಾಯಕ ನಾ....
|| ನಾ ಕಾಣೋ ಲೋಕವನ್ನು ||


ರಾತ್ರಿಯ ಕಳೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು...
ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೇ ಹಚ್ಚ ಹಸಿರು...
ಹಿರಿಯರ ಮಾತನು ಕೇಳಲು ದಕ್ಕಿತು ಅರಿವಿನ ಈ ವರವೂ....
ಕನ್ನಡ ಪದಗಳ ಬಾಗಿಲು ತೆರೆಯಿತು ಕಷ್ಟಗಳೇ ಇರವು...
ಅನುಭವದಾ ಭಾವಗಳಾ ಅನುಭವದಲ್ಲಿ....
ನಾನು ಕಂಡೇ ನಂಬಿಕೆಯಾ... ಜೀವನವಿಲ್ಲಿ...
ಹಾಡಲೆ ಬಾಳೋ ಕೋಗಿಲೆನಾ....
|| ನಾ ಕಾಣೋ ಲೋಕವನ್ನು ||

No comments:

Post a Comment