Friday 30 March 2012

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು

ದೇವರಲಿ ಕೇಳಿದೆ ವರವ ನೀಡಿದನು ಅವನಾ ಸ್ವರವಾ
ಜಗದಲೀ......ಇದ ಯಾರು ತಿಳಿಯೋರು
ನಾ ಹಾಡೊ ಹಾಡುಗಳೆಲ್ಲ ನಾನು ಪಟ್ಟ ಬದುಕಿನ ಪಾಡು
ಜಗದಲೀ......ಇದ ಯಾರು ಅರಿಯೋರು
ಮನಸಲಿ ಮಾಳಿವಾಸ ಬರದಿದ್ದು ಮರದಡಿವಾಸ
ಇದ್ದರೇನು ನೋವಿನ ನೋವುಗಳೆಲ್ಲಾ....
ರಾಗವಿದೆ ತಾಳ ಇದೆ ನನಗು ಒಂದು ಗರ್ವವಿದೆ
ಸತ್ಯವೆಂಬುದು ನನ್ನಲಿ ಉಂಟು ಬೇರೇನು ಬೇಕು..

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

ಹಣಕಾಗಿ ಹಾಡೊ ಹಾಡಿಗೆ ಬಿಡಿಗಾಸು ಬೆಲೆಯು ಇಲ್ಲ
ದಿನದಿನಾ......ಧರೇ ನಾ ಯಾರಿಗೆ
ಬೆಲೆ ಇಲ್ಲದ ಹಾಡು ಆದರು ಹಣವ ಎಸೆದು ಬೆಲೆ ಕಟ್ಟುವರು
ಅವರಿಗೆ.... ಎಂದೆಂದು ಕೈಮುಗಿವೆ
ಮನಸಿರೋರು ನನ್ನ ನೋಡುವರು ಮನಸೊಳಗೆ ಕಾಣುವೆ ಅವರ
ಮರೆಯಾದ ಹಾಡು ಇದು ತಾನೆ......
ಬಾಳು ಎಂಬಾ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಂದೆ ನೋಟ ಏಂದರೇನೆ.......

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು

No comments:

Post a Comment