ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ
ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಜೀವ ಜೀವದ ಸ್ವರಸಂಚಾರ ಅಮೃತ ಚೇತನ ರಸಧಾರ
ರಾಧಾಮಾಧವ ವೇಣುವಿಹಾರ ಗೀತೆಯೆ ಪ್ರೀತಿಯ ಜೀವನಸಾರ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ಪ್ರೇಮಗಾನದೆ ಪರವಶ ಈ ಧರೆ ಮಾನಸ ಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯ ತಾರೆ ಭವ್ಯ ರಸಿಕತೆ ಬಾಳಿಗಾಸರೆ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ ರಾಗ ರಾಗಿಣಿ ಯೋಗಾನುಬಂಧ
ಪಂಚಮವೇದ ಪ್ರೇಮದನಾದ ಪ್ರಣಯದ ಸರಿಗಮ ಭಾವಾನಂದ
ಗೆಜ್ಜೆಪೂಜೆ ಚಲನಚಿತ್ರದ ಈ ಸುಂದರ ಹಾಡಿನ ಪೂರ್ಣ lyrics ಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ReplyDeleteಧನ್ಯವಾದಗಳು. ನಾನು ಈ ಗೀತೆಯನ್ನು ತುಂಬಾ ಸಲ ಕೇಳಿದ್ದುಂಟು ಆದರೆ ಗೆಜ್ಜೆಪೂಜೆ ಚಿತ್ರವನ್ನು ಇತ್ತೀಚೆಗಷ್ಟೆ ನೋಡಿದ್ದು. ತುಂಬಾ ಚೆನ್ನಾಗಿದೆ ಚಿತ್ರ. ಖುಷಿಯಾಯಿತು ನೋಡಿ.
Delete