Saturday, 17 March 2012

ಮೈಲಾರಿ

ಚಿತ್ರ: ಮೈಲಾರಿ 

ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದಾ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..

ಕನಸನು ಕೊಂದಾಯಿತು
ಮಸಣಕೆ ತಂದಾಯಿತು
ಹೂಳುವಾ ವೇಳೆ ಅಳು ಯಾಕಿನ್ನು?
ಹಕ್ಕಿಯು ಹಾರೋಯಿತು
ಗೂಡಿದು ಹಾಳಾಯಿತು..
ಯಾರದೋ ಕಣ್ಣಾ ಬಲಿ ನಾವೇನು. ...
ಸಾವಿರ ಶೂಲಾ ಚುಚ್ಚೋ
ಗಾಯಕೂ ತುಂಬಾ ಹೆಚ್ಚು
ಪ್ರೀತಿಯಿಂದಾನೇ ಆಗೋ ಈ ನೋವು ..

ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??

ಅರಳಿದಾ ಕೆಂದಾವರೆ .
ದೇವರಿಗೆ ಎಂದಾದರೆ ..
ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ ...
ಭೂಮಿಯೇ ಹೋಳಾದರೆ
ಬಾನದು ಚೂರಾದರೆ
ಬಾಳುವಾ ಮಾತು ಅದು ಸಾಧ್ಯಾನಾ..
ಪ್ರೀತಿಗೆ ಸೋಲೇ ಇಲ್ಲ ..
ಎನ್ನುವ ದೊಡ್ಡಾ  ಸುಳ್ಳ ..
ನಂಬಲೇ ಬೇಡ ಇನ್ನು ನೀನೆಂದು ...

ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಜೀವ ಹೋದ ಬಳ್ಳಿಗೆ ನೀರೇಕೆ ?
ಲೂಟಿಯಾದ ಕೋಟೆಗೆ ಕಾವಲೇಕೆ ?
ನಾನೇ ಇರದ ನನ್ನಲಿ ನೀನೇಕೆ ??
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..
ಬುಟ್ ಬುಡೆ ,ಬುಟ್ ಬುಡೆ , ನನ್ನಷ್ಟಕ್ ನನ್ ಬುಟ್ ಬುಡೆ .. ಕೇಳೆ ..

Friday, 16 March 2012

ಯಾವ ಮೋಹನ ಮುರಳಿ ಕರೆಯಿತು

ಚಿತ್ರ: ಅಮೇರಿಕಾ ಅಮೇರಿಕಾ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಹೂವು ಹಾಸಿಗೆ ಚಂದ್ರ ಚಂದನ ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಸಪ್ತ ಸಾಗರದಾಚೆ ಎಲ್ಲೊ ಸುಪ್ತ ಸಾಗರ ಕಾದಿದೆ
ಮೊರೆಯದಲೆಗಲ ಮೂಕ ಮರ್ಮರ ಇಂದು ಇಲ್ಲಿಗು ಹಾರಿತೆ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು
ವಿವಶವಾಯಿತು ಪ್ರಾಣ ....ವಿವಶವಾಯಿತು ಪ್ರಾಣ ....
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ ....ವಿವಶವಾಯಿತು ಪ್ರಾಣ ....
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.....
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಅರಸು

ಚಿತ್ರ: ಅರಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು..
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು
ಎಲ್ಲೀ ನಿನ ಮನಸು

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು

ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು

ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ
ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು

ನೆನಪಿಗೊಂದು ಸಿಹಿಯ ನೋವು
ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು
ನನಗೆ ಬೇಡ ಬಿಡು

ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ
ಕಣ್ಣ ಕಣ್ಣೇ ಕುಕ್ಕುವುದೆ

ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು
ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು
ನಿನ್ನಾ ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು
ಹೃದಯವ ನೀ ಅರಸು

ವಂಶಿ

ಚಿತ್ರ : ವಂಶಿ
ಭುವನಂ ಗಗನಂ, ಸಕಲಂ ಶರಣಂ
ಅಖಿಲಂ ನಿಖಿಲಂ, ಶಿವನೇ ಶರಣಂ.
ಉಸಿರನು ಕಾಯಲು, ಹಸಿರನು ನೀಡಿದ.
ಇರುಳನು ನೀಗಲು, ಹಗಲನು ನೀಡಿದ.
ಶರಣು ಎನಲು ಇವನು ಒಲಿದು ಬರುವ
ಎದುರು ನಿಲಲು ಇವನು ಮುನಿದೆ ಬಿಡುವ. ||ಭುವನಂ||

ತಾಯಿಗೆ ಮಗನೆ ಜೀವ, ಆ ಮಗನಿಗೆ ತಾಯೇ ದೈವ.
ಇಲ್ಲಿ ತ್ಯಾಗ ಪ್ರೀತಿಯ ಕರುಳಿನ ಬಂಧ ನೋಡು.
ಜಗದ ಭಾರಿ ಸಾಗರವ ಜಿಗಿದು ಈಜಿ ಮೀರಿಸುವ
ಪ್ರಬಲ ಧೈರ್ಯ ನೀಡಿರುವ ಶಿವನೇ, ಏ ಶಿವನೇ ||ಭುವನಂ||

ಕಾಲ ಓಡುತಿದೆ ಬೇಗ, ಸರಿಯಾಗಿ ಬಾಳುವುದೇ ಯೋಗ.
ಜನಕಾಗಿ ಬಾಳುವ ಸೇವಕ ನಾನು ಈಗ.
ಶಿವನು ಮೇಲೆ ನೋಡಿರುವ ಜನರು ಮಾಡೋ ಕಾಯಕವ,
ನಿಜದ ಅಂಕ ನೀಡಿರುವ ತಿಳಿಯೋ ,ಏ ಶಿವನೇ ||ಭುವನಂ||

Wednesday, 7 March 2012

ಗಂಡುಗಲಿ ಕುಮಾರರಾಮ

ಚಿತ್ರ :- ಗಂಡುಗಲಿ ಕುಮಾರರಾಮ

ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....

ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....

ಗಿಣಿ ರಾಮ,  ಗಿಣಿ ರಾಮ.................
ಚತುರೆ ನೀಡಿದ ಉಂಗುರದೊಳಗೆssssssss
ಚತುರೆ ನೀಡಿದ ಉಂಗುರದೊಳಗೆ ಹೃದಯದಾಸೆಯು ತುಂಬಿರಬಹುದೇ............
ಹೃದಯದಾಸೆಯು ತುಂಬಿರಬಹುದೇ

ಕಾತರನೇ ಪ್ರೇಮದನೆ ಸೇರುವುದೇ ಶರಣೆsssssss

ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....

ಗಿಣಿ ರಾಮ,  ಗಿಣಿ ರಾಮ.................
ಗಿಣಿಯ ಒಳಗಡೆ ಜೀವವನ್ನಿರಿಸಿsssssssss

ಗಿಣಿಯ ಒಳಗಡೆ ಜೀವವನ್ನಿರಿಸಿ ಒಲವಿನುಡುಗೊರೆ ನೀಡಿರಬಹುದೇ....... 
ಒಲವಿನುಡುಗೊರೆ ನೀಡಿರಬಹುದೇ

ಸಡಗರವೋ ಮುಜುಗರವೋ ಪ್ರೇಮದ ಕಾತುರವೋssss 

ಗಿಣಿ ರಾಮ,  ಗಿಣಿ ರಾಮ, ಈ ಸಮಯ ಮಧುರಮಯ ಒಲವನು ತಿಳಿಸುವೆಯಾ.....
ಗಿಣಿ ರಾಮ,  ಗಿಣಿ ರಾಮ.................

Monday, 27 February 2012

ಸರಿಗಮ

ಚಿತ್ರ : ಹೂ 

ಸರಿಗಮ ಸರಿ ಮಿಡಿ ಮಿಡಿ ಮಿಡಿ ಸ್ನೇಹ ತಂತಿಯ....
ಸಿಹಿ ಸಿಹಿ ಸಿಹಿ ಜೇನಿಗಿಂತ ಸಿಹಿ ಸ್ನೇಹ ಕಲರವ....
ಕಣ್ಣಾಗಿ ಕಾಡುವೆ.. ಹೃದಯದಿ ಹಾಡುವೆ...
ಜೊತೆಯಾಗಿ ಹುಟ್ಟಲಿಲ್ಲ ನನಗಂತೂ ನೀನೆ ಎಲ್ಲಾ..
ಮಾಯಾಗಾರ ಸೃಷ್ಟಿಯಲ್ಲಿ ಹೂಗಾರ ನೀನೆ ಇಲ್ಲಿ.....

ಕಣ್ಣಲಿ ಕಣ್ಣಾಗಿ, ಮಣ್ಣಲಿ ಮಣ್ಣಾಗಿ, ನೆರಳಾಗಿ ನಾ ಕಾಯುವೇ..
ಅರಳಿದ ಹೂವಾಗಿ ಮನದಲಿ ನೀನು ಮುಡಿಯಲು ಹೂವೇತಕೆ...
ನನ್ನ ನಿನ್ನ ಆಸೆಯು ಒಂದೇ ಜೊತೆ ಜೊತೆ ಸಾಗುವ ಮುಂದೆ...
ನೀನೆ ನನ್ನ ಕನ್ನಡಿಯಂತೆ ಕಣ್ಣಾ ಮುಚ್ಚಿ ಮರೆವ ಚಿಂತೆ....
ಮಡಿಲಲ್ಲಿ ತೂಗದೆ ತಾಯಾಗಿ ಕೂಸಿಗೆ ||ಸರಿಗಮ||

ನಕ್ಕರೆ ಪನ್ನೀರು ಅತ್ತರೆ ಕಣ್ಣೀರು ನಾನಾಗಿ ಬೆರೆತೋಗುವೆ
ಮುಂಗಾರೇ ಬರಲಿ ಹಿಂಗಾರು ಇರಲಿ ಸೂರಾಗಿ ನಾ ಕಾಯುವೇ....
ನಿನ್ನ ನುಡಿ ಮಂತ್ರದ ಹಾಗೇ, ನಗು ಪುಣ್ಯ ಕ್ಷೇತ್ರದ ಹಾಗೇ..
ಆಸೆ ಭಾಷೆ ಎಲ್ಲವು ನೀನೇ, ಹಾವ ಭಾವ ಎಲ್ಲವು ನೀನೇ..
ಹೆಗಲಲ್ಲಿ ಹೊರದನೆಯೇ ತಂದೆಯೇ ನೀ ಕೂಸಿಗೆ ||ಸರಿಗಮ||

ಮನಸು ರಂಗಾಗಿದೆ ಇಂದು

ಚಿತ್ರ : ಸ್ಲಂ ಬಾಲ 

ಮನಸು ರಂಗಾಗಿದೆ ಇಂದು, ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ, ಏನೋ ಆವೇಗ....
ಬದುಕು ಇಂಪಾಗಿದೆ ಇಂದು, ಚೆಲುವ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗ, ಏನೋ ಆವೇಗ.....
ಏನೋ ಮಾಟ, ಏನೋ ಮೋಡಿ, ಬರುವುದೆಲ್ಲ ಬಂದೆ ಬಿಡಲಿ
ಗಗನದಾಚೆ ಬಯಲ ತುದಿಗೂ ಲಗ್ಗೆ ಇಡುವಾ.....
ಯಾವುದೋ ವೇಗ, ಏನೋ ಆವೇಗ..............

ಹೂವಂಥ ನಗೆ ಮಲ್ಲಿಗೆ ಮುಡಿದವಳೇ... ನಾ ಕೊಡುವೆ ಕಾಲೊಂದಿಗೆ
ನೀ ಕೊಟ್ಟ ಕಾಲೊಂದಿಗೆ, ನನ್ನೊಳಗೆ ಕನಸುಗಳ ಕಣ್ತುಂಬಿದೆ..
ಕತ್ತಲೆಯ ತೊಳೆದಂತೆ, ಬೆಳಕು ನೀ ಬಾಳಿಗೆ
ಈ ನಿನ್ನ ಕಲ್ಪನೆಗೆ, ತಾರೆಗಳ್ ಹೊದಿಸಿ ಲಾಲಿಯ ನಾ ಹಾಡುವೆ
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ ||ಮನಸು||

ನಿನ್ನೆದೆಯ ನಾ ಅಪ್ಪಲು, ಈ ಹೃದಯ ನವಿಲಂತೆ ಕುಣಿದಾಡಿತು
ಈ ಮಾತ ನೀ ಹೇಳಲು, ತುಟಿಯ ಸನಿಹ ಬರುವಾಸೆ ನನಗಾಯಿತು
ನೆರಳಾಗಿ ನಾನಿರುವೆ, ಜೊತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ ನೂರೆಂಟು ನೆನಪಿನ ಬುತ್ತಿಯ ಕಟ್ಟೋಣ ಬಾ......
ಪ್ರೀತಿಯೇ ನಿನ್ನಾ, ಪ್ರೀತಿಸುವೆ ಇನ್ನಾ ||ಮನಸು||