Monday, 11 June 2012

ಕಸ್ತೂರಿ ನಿವಾಸ


ಚಿತ್ರ: ಕಸ್ತೂರಿ ನಿವಾಸ


ಎಲ್ಲೇ ಇರು ಹೇಗೇ ಇರು
ಎಂದೆಂದು ಮನದಲ್ಲಿ ನೀ ತುಂಬಿರು
/
ಎಲ್ಲೇ/


ನನ್ನಾಸೆ ನೂರು ಹೂವಾಗಿ ನಗಲು
ಹೂಮಾಲೆ ಮಾಡಿ ನಿನಗೆಂದೆ ತರಲು
ಕಣ್ತುಂಬ ಕಂಡೆ ಆ ರೂಪವ
ಬೆಳಕಾಗಿ ಬಂದ ಆ ದೀಪವ
/
ಎಲ್ಲೇ/

ಬಾಳೆಂಬ ಗುಡಿಗೆ ನೀ ದೇವನಾದೆ
ಕರುಣಾಳು ನೀನು ಆಧಾರವಾದೆ
ನಾ ಬೇಡಲಾರೆ ವರವೇನನೂ
ನೀ ನೀಡು ಸಾಕು ನಗೆಯೊಂದನು
/
ಎಲ್ಲೇ/

Wednesday, 16 May 2012

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...

chitra: Milana
ಚಿತ್ರ: ಮಿಲನ

ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ...
ಬಾಸಿಂಗದಲ್ಲಿ ಕನಸಿನ ಮುತ್ತು ತೂಗಿದೆ....
ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....


ಆಟದ ಬಯಲಿನ ಆಟವ ತೊರೆದು
ನೂತನ ಪುಟವನು ತೆರೆಯುವ ಸಮಯ

ಕಳಶದ ಕನ್ನಡಿ ಹೊಳೆಯುತಲಿರಲು
ಮಮತೆಯ ಧಾರೆಯ ಎರೆಯುವ ಸಮಯ

ಹಿರಿಯರ ಹೃದಯವು ಹನಿಯುವ ಸಮಯ
ಹರೆಯದ ಕಣ್ಗಳು ಅರಳುವ ಸಮಯ


ಕೈಯಲಿರಲು ಹೂಮಾಲೆ ಕಣ್ಣಿನಲ್ಲಿ ಪ್ರಾಣ
ತೆರೆಯೊಂದು ಸರಿದಾಗ ಸಂಜೀವನ.....

ಅಕ್ಷತೆಯು ಈಗ ನಾಚುತ ಕೆಂಪಗಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ


ಮಳೆಬಿಸಿಲಿರಲಿ ಸಿಹಿ ಕಹಿ ಇರಲಿ
ಆಸರೆಯಾಗುವ ವಚನದ ಸಮಯ

ಮಂಗಳ ಸೂತ್ರದಿ ಬಾಳಿನ ಪಟವು
ಬಾನಿಗೆ ಏರುವ ಪಯಣದ ಸಮಯ


ನಲುಮೆಯ ದಿಬ್ಬಣ ನಲಿಯುವ ಸಮಯ
ನೆನಪಿನ ಬಾಗಿನ ನೀಡುವ ಸಮಯ


ಅಗ್ನಿ ಸಾಕ್ಷಿಯಲ್ಲೀಗ ಅಂತರಂಗ ಮಿಲನ
ಚೆಲುವಿನ ಔತಣದ ಸಮ್ಮಿಲನ..........


ಪಲ್ಲಕ್ಕಿಯಿಂದು ಹಾರುವ ಹಕ್ಕಿಯಾಗಿದೆ
ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ

ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....


ಬಲಗಾಲನಿಟ್ಟು ಬಾಳಿಂದು ಒಳಗೆ ಬಂದಿದೆ
ಮನದಂಗಳದಲ್ಲಿ ಪ್ರೀತಿಯ ದೀಪ ಬೆಳಗಿದೆ

ಬನ್ನಿ ಕುಣಿಯೋಣ ಎಲ್ಲ ಸೇರಿ ನಲಿಯೋಣ ಶುಭ ಕೋರಿ
ಉಲ್ಲಾಸದಲ್ಲಿ ಈ ದಿನ.......
ಬಾಳ ದಾರೀಲಿ ಹೊಸ ಜೋಡಿ ಹೊರಟಿದೆ ಜೊತೆಗೂಡಿ
ಎಲ್ಲೆಲ್ಲು ತಳಿರು ತೋರಣ.....

  

Friday, 30 March 2012

ಲಾಲಿಹಾಡು

ಚಿತ್ರ : ಲಾಲಿಹಾಡು

ಓಹೋ ಉಷೇ..............
ಓಹೋ ಉಷೇ.............
ಕಣ್ಣಿಗೇ..........
ಕಾಣಿಸೇ.............


ಹದಿನೇಳೂ ಚೈತ್ರಗಳಾ..
ತೇರಿನಲೀ ಬ೦ದವಳಾ
ಒಲವಿನ ಹೂವ ಹಾಸಿ ಹೇಳುವೆ ನಾ
ಸುಸ್ವಾಗತ ಸ್ವಾಗತ || ಓಹೋ ಉಷೇ ||

ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿಯೋ ಬ೦ಧುಗಳು ಯಾರಾದರೂ
ನಿನ್ನ ಜೊತೆಯಿರೇ ಭಾಗ್ಯವ೦ತರು
ನಾಳಿನ ಬಾಳಿನ ದಾರಿಯಲಿ
ಒಳ್ಳೆಯ ದಿನಗಳೇ ಬರುತಿರಲಿ
ಈ ಮನಸಿನಾ ಮೇಲೆ
ನಿನ್ನ ಗುರುತಿದೇ
ಸುಖವಾಗಿರು..........

ನಿನ್ನಿ೦ದಾ ಹೊಸ ಬೆಳಕೂ
ನಿನ್ನಿ೦ದಾ ಹೊಸ ಬದುಕೂ
ಮರೆಯದಾ ನೂರು ನೆನಪು ತರುವ
ಮನಸಿಗೆ ವ೦ದನೆ ವ೦ದನೆ


ಸಿಹಿ ಇರಲಿ ಕಹಿ ಇರಲಿ
ಈ ಜಗದಲಿ
ನಿನ್ನ ಪಾಲಿಗೆ
ಸಿಹಿ ತು೦ಬಲಿ
ಬದುಕುಗಳು ತಿರುವುಗಳು
ಹೇಗೆ ಇರಲಿ
ನೆನಪು ಉಳಿಯಲಿ
ಕನಸು ಅರಳಲಿ

ಏಳೂ ಬೀಳಿನ ಬಾಳಿನಲಿ
ಏಳಿಗೆಯೊ೦ದೇ ನಿನಗಿರಲಿ
ಪ್ರತಿಜನ್ಮಕೂ ನಿನ್ನ
ಹೆಸರುಳಿಯಲೀ
ಹಾಯಾಗಿರು ಎ೦ದೂ
ಸುಖವಾಗಿರು
ಈ ಪಲ್ಲವಿ ನೀನಾಗಿರು ......

ನಾ ಕಾಣೋ ಲೋಕವನ್ನು

ನಾ ಕಾಣೋ ಲೋಕವನ್ನು ಕಾಣೋರು ಯಾರು
ನಾ ಕಾಣೋ ಲೋಕವನ್ನು ಕಾಣೋರು ಯಾರು
ಹೇಳುವೆಯಾ ನೀ ಓ ಇಬ್ಬನಿಯೇ
ಮೆಲ್ಲನೆ ಹೇಳು ಓ ಮಲ್ಲಿಗೆಯೇ
ನಮ್ಮಾ ಕಾಯೋ ಭೂಮೀತಾಯೆ
ನಿನ್ನ ನೋಡಲೂ ನನಗೆ ಇನ್ನೊಂದು ಜನ್ಮವೂ ಬೇಕು
ಬಾನಾಡಿಯಾ ಹಾಗೆ ನಾ ಹಾಡಿ ಬದುಕಿರಲುಬೇಕು
|| ನಾ ಕಾಣೋ ಲೋಕವನ್ನು ||


ಅರಳಿದ ಹೂಗಳ ನೋಡದೆ ಇದ್ದರೂ... ಆ ನಗೆ ನಾನರಿವೆ....
ಹರಿಯುವ ನದಿಗಳ ಕಾಣದೆ ಇದ್ದರೂ... ಸ್ಪರ್ಶದಿ ನಾ ತಿಳಿವೆ....
ಕುಹು ಕುಹು ಕೂಗುವ ಕೋಗಿಲೆ ಗುಂಪಿನ ಇಂಪಲಿ ನಾನಿರುವೆ...
ಕಲ್ಪನೆ ಲೋಕದ ಬೆನ್ನನ್ನು ಏರೀ.. ರೆಕ್ಕೆಯ ನಾ ಪಡೆವೆ...
ನೋವಿಲ್ಲಾ ನಿಮ್ಮನು ನಾ.., ನೋಡದೆ ಇದ್ದರೂ...
ನೀವು ನನ್ನಾ ನೋಡಿದರೇ..., ಸಾಕಲ್ಲವೇ ಅದು...
ನಿಮ್ಮಾ ಮುಂದೇ... ಗಾಯಕ ನಾ....
|| ನಾ ಕಾಣೋ ಲೋಕವನ್ನು ||


ರಾತ್ರಿಯ ಕಳೆಯಲು ಅಮ್ಮನು ಹಾಡಿದ ಲಾಲಿಯ ಸವಿ ಕಥೆಯು...
ಕೇಳಿದ ಕಥೆಯಲಿ ಜಗವನು ಕಂಡೆನು ನೆನಪೇ ಹಚ್ಚ ಹಸಿರು...
ಹಿರಿಯರ ಮಾತನು ಕೇಳಲು ದಕ್ಕಿತು ಅರಿವಿನ ಈ ವರವೂ....
ಕನ್ನಡ ಪದಗಳ ಬಾಗಿಲು ತೆರೆಯಿತು ಕಷ್ಟಗಳೇ ಇರವು...
ಅನುಭವದಾ ಭಾವಗಳಾ ಅನುಭವದಲ್ಲಿ....
ನಾನು ಕಂಡೇ ನಂಬಿಕೆಯಾ... ಜೀವನವಿಲ್ಲಿ...
ಹಾಡಲೆ ಬಾಳೋ ಕೋಗಿಲೆನಾ....
|| ನಾ ಕಾಣೋ ಲೋಕವನ್ನು ||

ಹನಿ ಹನಿ ಸೇರಿ ಸಾಗರವಾಗಿ

ಚಿತ್ರ : ನಿನಗಾಗಿ  

ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲಾ ರಾಗವ ಕೂಗಿ
ರಾಗವು ಕರಗಿ ಮಳೆ ಹನಿಯಾಗಿ
ಹನಿ ಹನಿ ಎಲ್ಲಾ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳೀ ಚೈತ್ರಗಳಾಗಿ
ಓ ನವಿಲೇ ಎಲ್ಲಾ ನಿನಗಾಗೀ
ನವಿಲೇ ನಾಚುವಂಥಾ ನವಿಲೇ ನಿನಗಾಗೀ
ಓ ನವಿಲೇ ಎಲ್ಲಾ ನಿನಗಾಗೀ
ಕಣ್ಣು ಕೋರೈಸೋ ಕಣ್ಣೀಗಾಗೀ
|| ಹನಿ ಹನಿ ಸೇರೀ ||


ಚಿಗುರೋ ಎಲೆಗಳು ಬಾಗಿ ಗಿಡವಾಗಿ
ಇಬ್ಬನಿಯಾ ಕೂಗೀ ಜೊತೆಯಾಗಿ ಹೂವಾಗೀ
ಹೂವುಗಳೆಲ್ಲಾ ಮಾಗೀ ತಲೆದೂಗೀ
ಚಿತ್ತಾರವಾಗೀ ಸಂಗಾತಿ ಹಾಡಾಗೀ
ಆ ಹಾಡಿಗೇ ಈ ಗುಂಡಿಗೆ ಲಯವಾಗೀ
ಮೈ ಮರೆಯಲೂ
ಆಆಆಆಆ ಆಆಆಅ

ಆ ಹಾಡಿಗೆ ಮರುಳಾಗೀ ನಾ ಬಂದೇ ಕೊರಳಾಗೀ
ಆ ಹಾಡಿಗೆ ಮರುಳಾಗೀ ನಾ ಬಂದೇ ಕೊರಳಾಗೀ
ನಿನ್ನ ಸರಿ ಗಮ ದೊಳಗಿನ ಕವಿತೇ ಮೆಚ್ಚಿ
ಕುಣಿಯಲು ಬಂದೆ ಗರಿಯಾ ಬಿಚ್ಚಿ
ಓ ನವಿಲೇ ಎಲ್ಲಾ ನಿನಗಾಗೀ
ನವಿಲೇ ನಾಚುವಂಥಾ ನವಿಲೇ ನಿನಗಾಗೀ
|| ಹನಿ ಹನಿ ಸೇರೀ ||


ಭಾವನ ಸಾಗರ ಕರಗೀನೀರಾಗೀ ಅಲೆಯಾಗೀ ಬಂತು
ಹೃದಯಕ್ಕೆ ಕಣ್ಣಾಗೀ
ಕಣ್ಣುಗಳೆರಡೂ ಬೀಗೀ ಬಾನಾಚೆತಂಗಾಳೀಯಾಗೀ
ಹುಡುಕಿರಲೂ ಕನಸಿಗಾಗೀ
ಚುಕ್ಕೀಗಳೇ ಸಾವಿರ ಕನಸುಗಳಾಗೀ ಕಣ್ಣ್ ತುಂಬಲೂ
ನೀ ಬಂದೇ ಜೊತೆಯಾಗೀ ಆ ಕನಸಿಗೆ ಜೊತೆಯಾಗೀ
ಈ ಕನಸಿನ ಕನಸಲ್ಲಿ ಸ್ನೇಹದ ಜ್ಯೋತೀ
ಬೆಳಗಲಿ ಎಂದೂ ನೇಸರನಾಗೀ
ಒ ನವಿಲೇ ಎಲ್ಲಾ ನಿನಗಾಗೀ
ಚೆಲುವೇ ನಾಚುವಂಥಾ ಚೆಲುವೇ ನಿನಗಾಗೀ
|| ಹನಿ ಹನಿ ಸೇರೀ ||

ನಿನಗಾಗಿ

ಚಿತ್ರ: ನಿನಗಾಗಿ

ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಕಣ್ಣು ಮುಚ್ಚಿಯು ಬೆಳಕಿದೆ
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲಾ ಏನಾದೆನಾ
ನೀನೆ ನಾನೇನಾ ನಿನ್ನೊಳಗೆ ನೀರಾದೆನಾ
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||


ಆ ಮೋಡದಾ ನೆರಳಲು ಕಾಣುವೆ
ನೆರಳಾಗೊ ನಿನ್ನ ರೂಪವಾ..
ಈ ಇಬ್ಬನಿ ಹನಿಯಲಿ ಕಣ್ಣಲಿ
ತೋರಿಹುದು ನಿನ ಬಿಂಬವಾ
ಹಿಮದಲೂ ನಿನ್ನ ಚಿತ್ರವಾ
ನನ್ನ ಉಸಿರೆ ಬಿಡಿಸಿದೇ..
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ಹಗಲುಗನಸಲ್ಲೆ ಕಣ್ಮುಚ್ಚಿ ನಡೆದಿರುವೆ ನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||


ಆ ಕಡಲಿನಾ ಅಲೆಗಳಾ ಮೇಲೆಯೂ
ನಿನ್ನ ತುಂಟ ಕುಣಿದಾಟವೇ..
ಆ ಚಿಗುರಿನಾ ಎಲೆಗಳಾ ಮೇಲೆ..
ನಿನ್ನ ಲಜ್ಜೆಯಾ ರೂಪವೇ..
ಬೀಸೊಗಾಳಿ ಎದೆಯಲೂ
ನಿನ್ನ ಎದೆಯಾ ಬಡಿತವೇ..
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ನಿನ್ನ ನೆನೆನೆನೆದು ನಿನ್ನಲ್ಲೆ ಕಲೆದೋದೆನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಕಣ್ಣು ಮುಚ್ಚಿಯು ಬೆಳಕಿದೆ
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲಾ ಏನಾದೆನಾ..
ನೀನೆ ನಾನೇನಾ ನಿನ್ನೊಳಗೆ ನೀರಾದೆನಾ..
ಎಲ್ಲೆಲ್ಲಿ ನಾ ನೋಡಲೀ
ನಿನ್ನದೆ ಚಿಲಿಪಿಲೀ..
ಎಲ್ಲೆಲ್ಲಿ ನಾ ನೋಡಲೀ||

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ

ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು


ದೇವರಲಿ ಕೇಳಿದೆ ವರವ ನೀಡಿದನು ಅವನಾ ಸ್ವರವಾ
ಜಗದಲೀ......ಇದ ಯಾರು ತಿಳಿಯೋರು
ನಾ ಹಾಡೊ ಹಾಡುಗಳೆಲ್ಲ ನಾನು ಪಟ್ಟ ಬದುಕಿನ ಪಾಡು
ಜಗದಲೀ......ಇದ ಯಾರು ಅರಿಯೋರು
ಮನಸಲಿ ಮಾಳಿವಾಸ ಬರದಿದ್ದು ಮರದಡಿವಾಸ
ಇದ್ದರೇನು ನೋವಿನ ನೋವುಗಳೆಲ್ಲಾ....
ರಾಗವಿದೆ ತಾಳ ಇದೆ ನನಗು ಒಂದು ಗರ್ವವಿದೆ
ಸತ್ಯವೆಂಬುದು ನನ್ನಲಿ ಉಂಟು ಬೇರೇನು ಬೇಕು..


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು


ಹಣಕಾಗಿ ಹಾಡೊ ಹಾಡಿಗೆ ಬಿಡಿಗಾಸು ಬೆಲೆಯು ಇಲ್ಲ
ದಿನದಿನಾ......ಧರೇ ನಾ ಯಾರಿಗೆ
ಬೆಲೆ ಇಲ್ಲದ ಹಾಡು ಆದರು ಹಣವ ಎಸೆದು ಬೆಲೆ ಕಟ್ಟುವರು
ಅವರಿಗೆ.... ಎಂದೆಂದು ಕೈಮುಗಿವೆ
ಮನಸಿರೋರು ನನ್ನ ನೋಡುವರು ಮನಸೊಳಗೆ ಕಾಣುವೆ ಅವರ
ಮರೆಯಾದ ಹಾಡು ಇದು ತಾನೆ......
ಬಾಳು ಎಂಬಾ ನಾಟಕವು ಎಷ್ಟೋ ಇದೆ ಭೂಮಿಯಲಿ
ನೋಡಬಂದೆ ನೋಟ ಏಂದರೇನೆ.......


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು
ನಿಮ್ಮಯ ಹಾಗೆ ರೆಕ್ಕೆಯ ಪಡೆಯಲು ಆಸೆಯ ದಿನ ಕಳೆದೇ
ರೆಕ್ಕೆಗಳಿರದೆ ಬಾನಿಗೆ ಹಾರಿ ಮರಳಿ ಕೆಳಗಿಳಿದೆ
ಒಂದು ಹಾಡು ಸಾಲದು ಮನಸು ಬಿಚ್ಚಲು
ಹೃದಯತಾಳದು ನೀ ಕೇಳು


ನನ್ನೆದೆ ಬಾನಲಿ ರೆಕ್ಕೆಯ ತೆರೆಯೋ ಬಣ್ಣದ ಹಕ್ಕಿಗಳೇ
ನನ್ನ ಕಥೆಯಾ ಕೇಳಲು ನಿಮ್ಮ ರೆಕ್ಕೆಯು ತಾನೆ ಮುಚ್ಚುವುದು
ಕಲಕಲ ನಗುವಲಿ ಕಚಗುಳಿ ಇರಿಸಿ ಚಿಮ್ಮುವ ನೀರಲೆಯೇ
ನನ್ನ ಸ್ಥಿತಿಯಾ ಕೇಳಲು ನಿಮ್ಮಯ ಸಡಗರ ಮೌನವ ತಾಳುವುದು