Tuesday 13 September 2011

ನನಗಿಷ್ಟವಾದ ಹಾಡು

ಆ ಕರ್ಣನಂತೆ.. ನೀ ದಾನಿಯಾದೆ...
ಇನ್ನೊಂದು ಜೀವಕೆ ಆಧಾರವಾದೆ... -|2|-

ಆ ಕರ್ಣನಂತೆ...

ಕಸದಂತೆ ಕಂಡರು.. ಮನೆಯಲ್ಲಿ ಎಲ್ಲರೂ..
ದಿನವೆಲ್ಲ ಬಾಳಲಿ ಕಣ್ಣೇರು ತಂದರು... -|2|-
ನಿನ್ನಂತರಂಗವ.. ಅವರೇನು ಬಲ್ಲರು..
ನಿನ್ನನ್ನು ಹೆತ್ತವರು.. ಮಹಾಪುಣ್ಯವಂತರು... - ||ಆ ಕರ್ಣನಂತೆ ನೀ ದಾನಿಯಾದೆ..||

ಆ ಕರ್ಣನಂತೆ...

ಬಾಳೆಂಬ ಆಟದಿ.. ಚೆಂಡಂತೆ ಎಲ್ಲರೂ..
ತನ್ನಾಸೆಯಂತೆಯೇ ಆಡೋದು ದೇವರು.. -|2|-
ಇಂದೆಲ್ಲಾ ನಾಳೆ.. ಸಾಯೋದೇ ಎಲ್ಲರು..
ಎನಾದರೆನೀಗ ನಿನ್ನನ್ನು ಮರೆಯರು... - ||ಆ ಕರ್ಣನಂತೆ ನೀ ದಾನಿಯಾದೆ..||

ಪ್ರೀತಿಯಲಿ ಸುಖವುಂಟು.. ಸ್ನೇಹದಲಿ ಹಿತವುಂಟು...
ತ್ಯಾಗಕ್ಕೆ ಫಲವುಂಟು.. ನಿನಗೊಂದು ಬೆಲೆಯುಂಟು...

ಆ...ಆ....ಆ..ಆ..ಆ...

ಪ್ರೀತಿಯಲಿ ಸುಖವುಂಟು.. ಸ್ನೇಹದಲಿ ಹಿತವುಂಟು...
ತ್ಯಾಗಕ್ಕೆ ಫಲವುಂಟು.. ನಿನಗೊಂದು ಬೆಲೆಯುಂಟು...
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ..
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು...

ಆ ಕರ್ಣನಂತೆ.. ನೀ ದಾನಿಯಾದೆ...
ಇನ್ನೊಂದು ಜೀವಕೆ ಆಧಾರವಾದೆ...

ಆ ಕರ್ಣನಂತೆ...

No comments:

Post a Comment