Monday 19 September 2011

ಮಾಯದಂಥ ಮಳೆ ಬಂತಣ್ಣ

ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ


ಅಂಗೈಯಷ್ಟು ಮೋಡಿನಾಗಿ ಭೂಮಿ ತೂಕದ ಗಾಳಿ ಬೀಸಿ
ಭೂಮಿ ತೂಕದ ಗಾಳಿ ಬೀಸಿ ಭೂಮಿ ತೂಕದ ಗಾಳಿ ಬೀಸಿ
ಗುಡಗಿ ಗುಡಾಗಿ ಚೆಲ್ಲಿದಳೊ ಗಂಗವ್ವ ತಾಯಿ
ಗುಡಗಿ ಗುಡಾಗಿ ಚೆಲ್ಲಿದಳೊ ಗಂಗವ್ವ ತಾಯಿ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ


ಏರಿಮ್ಯಾಗಳ ಬಲ್ಲಳರಾಯು ಕೆರೆಯ ಒಳ್ಗಳ ಬೆಸ್ತರ ಹುಡ್ಗ
ಕೆರೆಯ ಒಳ್ಗಳ ಬೆಸ್ತರ ಹುಡ್ಗ ಕೆರೆಯ ಒಳ್ಗಳ ಬೆಸ್ತರ ಹುಡ್ಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವಳಲ್ಲ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವಳಲ್ಲ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ


ಆರುಸಾವಿರ ವಡ್ಡರ ಕರ್ಸಿ ಮೂರುಸಾವಿರ ಗುದ್ದಲಿ ತರ್ಸಿ
ಮೂರುಸಾವಿರ ಗುದ್ದಲಿ ತರ್ಸಿ ಮೂರುಸಾವಿರ ಗುದ್ದಲಿ ತರ್ಸಿ
ಕೋಲು ಕೋಲಿಗೆ ಮಣ್ಣಣ್ ಹಾಕಿಸಯ್ಯೋ ನಾ ನಿಲ್ಲುವಳಲ್ಲ
ಕೋಲು ಕೋಲಿಗೆ ಮಣ್ಣಣ್ ಹಾಕಿಸಯ್ಯೋ ನಾ ನಿಲ್ಲುವಳಲ್ಲ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ


ಆರುಸಾವಿರ ಕುರಿಗಳ ತರ್ಸಿ ಮೂರುಸಾವಿರ ಕುಡಿಗೋಲು ತರ್ಸಿ
ಮೂರುಸಾವಿರ ಕುಡಿಗೋಲು ತರ್ಸಿ ಮೂರುಸಾವಿರ ಕುಡಿಗೋಲು ತರ್ಸಿ
ಕಲ್ಲು ಕಲ್ಲಿಗೆ ರೈತರ ಬಿಡಿಸೈಯ್ಯೊ ನಾ ನಿಲ್ಲುವಳಲ್ಲ
ಕಲ್ಲು ಕಲ್ಲಿಗೆ ರೈತರ ಬಿಡಿಸೈಯ್ಯೊ ನಾ ನಿಲ್ಲುವಳಲ್ಲ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ


ಒಂದು ಬಂಡಿಲಿ ವಿಳೇದಡ್ಕೆ ಒಂದು ಬಂಡಿಲಿ ಸಿಗಡಿ ತಮ್ಟ
ಒಂದು ಬಂಡಿಲಿ ಸಿಗಡಿ ತಮ್ಟ ಒಂದು ಬಂಡಿಲಿ ಸಿಗಡಿ ತಮ್ಟ
ಮೂಲೆ ಮೂಲೆಲಿ ಗಂಗಮ್ನ ಮಾಡಿಸಯ್ಯೊ ನಾ ನಿಲ್ಲುವಳಲ್ಲ
ಮೂಲೆ ಮೂಲೆಲಿ ಗಂಗಮ್ನ ಮಾಡಿಸಯ್ಯೊ ನಾ ನಿಲ್ಲುವಳಲ್ಲ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ
ಮಾಯದಂಥ ಮಳೆ ಬಂತಣ್ಣ ಮದಕಾದ ಕೆರೆಗೆ

No comments:

Post a Comment