Thursday 22 September 2011

ಮೆರವಣಿಗೆ

ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲು ಇದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ //೨//


ಕನ್ನಡಿ ಒಳಗೆ ನಿನ್ನದೆ ಬಿಂಬ ಚಂದದಿ ನಗುತಲಿದೆ
ಮುಟ್ಟಲು ಹೋದರೆ ನಾಚಿಕೆಯಲ್ಲಿ ಅಲೆಯಲಿ ಸರಿಯುತಿದೆ
ಮೆಲ್ಲಗೆ ಈಗ ಬೆಲ್ಲದ ಹಾಗೆ ಕಲ್ಲೆದೆ ಕರಗುತಿದೆ
ಮುಳ್ಳಿನ ಮನದ ಮಂಟಪದಲ್ಲು ಮಲ್ಲಿಗೆ ಅರಳುತಿದೆ


ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲುಕಿದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ


ಸುಂದರವಾದ ಸುಂಟರಗಾಳಿ ಮನದಿ ಬೀಸುತಿದೆ
ನಿನ್ನದೆ ರೂಪ ನಿನ್ನದೆ ಧ್ಯಾನ ನೆನಪಿನ ನಾನೊಳಗೆ
ಪದಗಳೆ ಇರದ ಕಾಗದವನ್ನು ಮನದಲ್ಲೆ ಬರೆಯುವೆನು
ಕದಗಳೆ ಇರದ ಕನಸಿನ ಊರಿಗೆ ನಿನ್ನನು ಕರೆಯುವೆನು


ನನ್ನೊಲವೆ ನನ್ನೊಲವೆ
ಹೀಗೊಂದು ಹೃದಯ ನನ್ನಲುಕಿದೆಯಾ
ಎನ್ನುವ ಶಂಕೆಯು ಮೂಡುತಿದೆ
ಅಂದದ ಅಂಜಿಕೆ ಕಾಡುತಿದೆ
 

No comments:

Post a Comment