Monday 19 September 2011

ಸೂರ್ಯ ಕಣ್ಣು ಹೊಡ್ದ

ಸೂರ್ಯ ಕಣ್ಣು ಹೊಡ್ದ
ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ
ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ
ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ
ಆಕಾಶ ಖಾಲಿ
ಓ ಓ ಓ ಓ ಓ!


ನನ್ನ ಹುಡುಗಿ ಜಾನಪದ
ಸಾದಾ ಸೀದಾ ಹಳ್ಳಿ ನಾದ
ನನ್ನ ಹುಡುಗಿ ಜೀವಪದ
ಬದುಕೊ ಕನಸೆ ಇವಳಿಂದ
ತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದನ
ಸೂರ್ಯ ಕಣ್ಣು ಹೊಡ್ದ
ಕೈಲಿ ರೋಜ ಹಿಡಿದ
'ಹೆಸ್ರು ಎನೆ?' ಅಂದ
ನನ್ ಹುಡುಗೀನ್ ನೋಡಿ
ಓ ಓ ಓ ಓ!


ನಿನ್ನ ಅಂದ
ಕಂಡು ಕಂದ
'ಆ ಬೊಂಬೆ ಬೆಕು' ಅಂದ
'ಭೂಮಿಗ್ಯಾಕೆ ಇಳಿದಳೀಕೆ?'
ಅಂತ ಇಂದ್ರ ನೊಂದ

ಚಿನ್ನಾ!.. ನಿನ್ನಾ!..
ನಿನ್ನಾ ನೋಡೊ ಆಸೆ
ನೋಡಿ ಹಾಡಿ ಆಸೆ
ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿ
ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ
ಸುವ್ವಿ ಹಾಡು ಮಾತಲ್ಲಿ
ಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!


ದೀಪವಿರದ ಲೋಕದಲ್ಲಿ ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕು
ಅಂದಾ!.. ಚಂದಾ!..
ಸಾರಾ ಕೇಳಲಂತ..
ಸಾರು ಕಟ್ಟಿನಿಂತ
ಇಡಿ ಸೃಷ್ಟಿ ಕಂಡಾಗ
..?
ನನ್ನ ಹುಡುಗಿ ಕನ್ನಡತಿ
ಸಹನೆ, ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ
ಪ್ರಣಯ ಇವಳ ಕಿವಿ ಜುಮುಕಿ
ಲ ಲ ಲ ಲಾ ಲಾ


ಸೂರ್ಯ ಕಣ್ಣು ಹೊಡ್ದ
ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ
ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ
ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ
ಆಕಾಶ ಖಾಲಿ
ಓ ಓ ಓ ಓ ಓ!

No comments:

Post a Comment