Friday 16 September 2011

ಶುಕ್ಲಾಂಬರಧರಂ

ಶುಕ್ಲಾಂಬರಧರಂ ವಿಷ್ಣುಂ ಶಶಿ ವರ್ಣಂ ಚತುರ್ರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇತ್

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದ ವರ ಪಾಲಿನ ಕಲ್ಪ ತರು ನೀನೆ

ಭಾದ್ರಪದ ಶುಕ್ಲದಾ ಚೌತಿ ಯಂದು
ನೀ ಮನೆ ಮನೆಗೂ ದಯ ಮಾಡಿ ಹರಸು ಎಂದು
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ್ಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾ ಸಿಂಧು

ಈರೇಳು ಲೋಕದ ಅಣುವಣುವಿನಾ
ಇಹ ಪರದಾ ಸಾಧನಕೆ ನೀ ಕಾರಣ
ನಿನ್ನೊಲು ಮೆನೋಟದಾ ಒಂದು ಹೊನ್ನ ಕಿರಣಾ
ನೀವಿದರೆ ಸಾಕಯ್ಯಾ ಜನ್ಮ ಪಾವನ

ಪಾರ್ವತಿ ಪರ ಶಿವನಾ ಪ್ರೇಮ ಪುತ್ರನೆ
ಪಾಲಿಸುವಾ ಪರ ದೈವಾ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ



No comments:

Post a Comment