Friday, 23 September 2011

ಅವನಲ್ಲಿ ಇವಳಿಲ್ಲಿ

ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ
ಎದುರೆದುರು ಬಂದಾಗ ಹೆದರೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ

ನೋಡಿ ನೋಡಿ ಪ್ರೇಮವನು ಮಾಡೋದಲ್ಲ
ಮಾಡುತಲಿ ಹಾಡೋದಲ್ಲ
ಹಾಡಿನಲಿ ಹೇಳೋದಲ್ಲ ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ

ನೀನೆ ಎಲ್ಲ ನೀನಿರದೆ ಬಾಳೆ ಇಲ್ಲ
ಅನ್ನುವುದು ಪ್ರೇಮ ಅಲ್ಲ
ಮರಗಳನು ಸುತ್ತೋದಲ್ಲ ಕವನಗಳ ಗೀಚೋದಲ್ಲ
ನೆತ್ತರಲಿ ಬರೆಯೋದಲ್ಲ ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮ

No comments:

Post a Comment