Friday, 23 September 2011

ಮಧುರ ಪಿಸುಮಾತಿಗೆ

ಮಧುರ ಪಿಸುಮಾತಿಗೆ ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ

ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ
ಏನಿದು ಕಾತರ ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....

ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ 
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ.... 
ಸೋತೆ ನಾನು ನಿನ್ನ ಪ್ರೀತಿಗೆ..... 

No comments:

Post a Comment