Friday 16 September 2011

ಮುಂಗಾರು ಮಳೆ

ಅರಳುತಿರು ಜೀವದ ಗೆಳೆಯ ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೆ ಪ್ರೇಮದಾ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ ಹೀಗೆ ಸುಮ್ಮನೆ ||ಅರಳುತಿರು||

ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ
ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೆ
ಬೀಸುವ ಗಾಳಿಯ ಹಕ್ಕಿಯ ಹಾಡಿನ ನಂಟಿಗ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ

ಬೇಡ ಗೆಳಯ ನಂಟಿಗೆ ಹೆಸರು ಯಾಕೆ ಸುಮ್ಮನೆ ||ಅರಳುತಿರು||

ಮಾತಿಗೆ ಮೀರೀದ ಭಾವದ ಸೆಳೇತವೇ ಸುಂದರ
ನಲುಮೆಯ ತುಂಬಿದ ಮನಸಿಗೆ ಬಾರದು ಬೇಸರ
ಬಾಳದಾರಿಯಲಿ ಬೇರೆಯಾದರು ಚಂದಿರ ಬರುವನು ನಮ್ಮಜೊತೆ
ಕಾಣುವೆನು ಅವನಲ್ಲಿ ನಿನ್ನನೆ
ಇರಲಿ ಗೆಳೆಯ ಈ ಅನುಬಂಧ ಹೀಗೆ ಸುಮ್ಮನೆ ||ಅರಳುತಿರು||



No comments:

Post a Comment