Tuesday 13 September 2011

ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ

ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ,
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ..ಸಪ್ತಗಿರಿವಾಸ...

ರಾಮನಿಗೆ ಕೌಸಲ್ಯೆ ಲಾಲಿ ಹಾಡಿದ ರೀತಿ,
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ..
ರಾಮನಿಗೆ ಕೌಸಲ್ಯೆ ಲಾಲಿ ಹಾಡಿದ ರೀತಿ,
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ..
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ..
ಹಾ... ಹಾ...ಆ..ಆ..ಆಆ...
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ..
ಧನ್ಯನಾಗುವೆನಿಂದು ಕರುಣಿಸೋ...ದಯಮಾಡಿ... -||ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ..||-

ಇರುಳು ಮುಗಿಯದೆ ಇರಲಿ.. ಹಗಲು ಮೂಡದೆ ಇರಲಿ...
ಅನುಗಾಲ ಈ ಸೇವೆ ಸಾಗುತಲೇ ಇರಲಿ..
ಇರುಳು ಮುಗಿಯದೆ ಇರಲಿ.. ಹಗಲು ಮೂಡದೆ ಇರಲಿ...
ಅನುಗಾಲ ಈ ಸೇವೆ ಸಾಗುತಲೇ ಇರಲಿ..
ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ..
ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ..
ನಿನ್ನ ಕಾಣದೇ ಜೀವ ಕ್ಷಣ ಕಾಲ ನಿಲ್ಲದಯ್ಯ ... -||ಪವಡಿಸು ಪರಮಾತ್ಮ ಶ್ರೀ ವೆಂಕಟೇಶಾ..||- 

No comments:

Post a Comment