Saturday 17 September 2011

ಶುಭಮಂಗಳ


ಹೂವೊಂದು
ಬಳಿ ಬಂದು
ತಾಕಿತು ಎನ್ನೆದೆಯಾ..
ಏನೆಂದು.. ಕೇಳಲು.. ಹೇಳಿತು.. ಜೇನಂತ ಸಿಹಿನುಡಿಯಾ
ಜೇನಂತ ಸಿಹನುಡಿಯ |೨|

ಲ ಲ ಲ ಲ ಲಾ ಲ ಲ |೨|

ಕಾವೇರಿ ಸೀಮೆಯ ಕನ್ಯೆಯು ನಾನು
ಬೇಲೂರು ಬಾಲೆಯ ಪ್ರತಿನಿಧಿ ನಾನೂ
ತುಂಗೆಯ.. ಲ ಲ ಲಾ ಲ
ಭದ್ರೆಯ.. ಲ ಲ ಲಾ ಲ
ತುಂಗೆಯ ಭದ್ರೆಯ ತೌರಿನ ಹೂ ನಾನು

ತೌರಿನ ಹೂ ನಾನು

ಹೂವೊಂದು
ಬಳಿ ಬಂದು
ತಾಕಿತು ಎನ್ನೆದೆಯಾ..
ಏನೆಂದು.. ಕೇಳಲು.. ಹೇಳಿತು..
ಜೇನಂತ ಸಿಹನುಡಿಯ |೨|

ಸೂರ್ಯನ ಕಾಂತಿಯ ಸುಂದರಿ ನಾನು
ತಿಂಗಳ ಬೆಳಕಿನ ಕಂಗೆಯು ನಾನೂ
ಪ್ರೇಮದ.. ಲ ಲ ಲಾ ಲ
ಕಾವ್ಯಕೆ.. ಲ ಲ ಲಾ ಲ
ಪ್ರೇಮದ ಕಾವ್ಯಕೆ ಪೂಜೆಯ ಹೂ ನಾನು
ಪೂಜೆಯ ಹೂ ನಾನು

ಹೂವೊಂದು
ಬಳಿ ಬಂದು
ತಾಕಿತು ಎನ್ನೆದೆಯಾ..
ಏನೆಂದು.. ಕೇಳಲು.. ಹೇಳಿತು..
ಜೇನಂತ ಸಿಹನುಡಿಯ |೨|

ಅರಿಶಿನ ಕುಂಕುಮ ಶೋಭಿತೆ ನಾನು
ವಧುವಿನ ಶೃಂಗಾರ ಭೂಷಿತೆ ನಾನೂ
ಮಂಗಳ.. ಲ ಲ ಲಾ ಲ
ಸೂತ್ರವ.. ಲ ಲ ಲಾ ಲ
ಮಂಗಳ ಸೂತ್ರವ ಬೇಡುವ ಹೂ ನಾನು
ಬೇಡುವ ಹೂ ನಾನು


ಹೂವೊಂದು
ಬಳಿ ಬಂದು
ತಾಕಿತು ಎನ್ನೆದೆಯಾ..
ಏನೆಂದು.. ಕೇಳಲು.. ಹೇಳಿತು..
ಜೇನಂತ ಸಿಹನುಡಿಯ |೨|


ಹೂವೊಂದು
ಬಳಿ ಬಂದು
ತಾಕಿತು ಎನ್ನೆದೆಯಾ..
ಏನೆಂದು.. ಕೇಳಲು.. ಹೇಳಿತು..
ಜೇನಂತ ಸಿಹನುಡಿಯ |೨|

No comments:

Post a Comment