Monday 19 September 2011

ಕಲಿತ ಹುಡುಗಿ

ಕಲಿತ ಹುಡುಗಿ ಕುದ್ರಿ ನಡಿಗಿ ನಡೆದ ಬರತಿತ್ತ
ಕಲಿತ ಹುಡುಗಿ ಚಿಗರಿ ನಡಿಗಿ ಬಳುಕಿ ಬರತಿತ್ತ
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ…
ಅದನ್ನು ಕಂಡ ನಮ್ಮ ಹಳ್ಳಿ ಮಂದಿಯಾ… ನಿದ್ದಿ ಹಾರಿ ಹೋತ….
|| ಕಲಿತ ಹುಡುಗಿ ||


ಏಣಿ ಹತ್ತಿ ವೆಂಕಟರಮಣಾ ಸುಣ್ಣ ಬಳಿಯುತಿದ್ನಾ..
ಈ ಚಮಕ್ಕು ರಾಣಿಯ….
ಈ ಚಮಕ್ಕು ರಾಣಿಯ…. ಹೀಲ್ಸಿನ ಸದ್ದಿಗೆ ಬಗ್ಗಿ ನೋಡಿಬಿಟ್ನಾ..
ಕಂಡಿದ್ರೆ ತಾನೆ ಆ ಬಡ ಜೀವಾ ಇಂತ ಅಂದ ಚಂದ
ಸೈಡು ಹೊಡೆಯೋಕೋಗಿ ಮೋರಿ ಸೈಡು ಜಾರಿ ತಡಕ್ಕ್ ಅಂತ ಬಿದ್ನಾ…
|| ಕಲಿತ ಹುಡುಗಿ ||


ಘಮ ಘಮ ಸೆಂಟನ್ನು ಹಚ್ಚಿಕೊಂಡ ಇವಳು ಕುಣಿಸುತ್ತಿದ್ಳು ಸೊಂಟ
ತಡೆಯೋಕಾಗದೆ…
ತಡೆಯೋಕಾಗದೆ… ಮೆಳ್ಳಗಣ್ಣ ಸೀನ ಹಿಂದೆ ಹೊಂಟೆ ಬಿಟ್ನಾ
ಹತ್ತಿರೊ ಸೈಕಲ್ ಪಂಚರ್ ಆದರೂ ಓಡ್ಸೋದು ಬಿಡಲಿಲ್ಲ
ಲೈಟು ಕಂಬಕ್ಕೆ ಡಿಚ್ಚಿ ಹೊಡೆದೆಬಿಟ್ಟ ಹಲ್ಲು ಉಳಿಯಲಿಲ್ಲ….
|| ಕಲಿತ ಹುಡುಗಿ ||


ಕಟ್ಟೆ ಮ್ಯಾಲೆ ಕೂತುಕೊಂಡ ಸೇಠು ಹೇಳುತಿದ್ನ ಜೋಕು
ಪಕ್ಕ್ ದಲ್ಲಿ ಮೋನಾ ಡಾರ್ಲಿಂಗ್…
ಮೋನಾ ಡಾರ್ಲಿಂಗ್… ಹಾದು ಹೋದಳು ಹಾರ್ತಾ ಇತ್ತು ಪ್ರಾಕು
ಮೈಮ್ಯಾಲೆ ಕಿರಿಕ್ಕು ಎಳಕೊಂಡ ಸೇಠು ಮರ್ತೆ ಬಿಟ್ನ ಜೋಕು
ಪ್ಯಾರಾಚೂಟು ಪ್ರಾಕಿಗೆ ಆಗೆಬಿಟ್ಟ ಕ್ರ್ಯಾಕು ಸೆಮಿಕ್ರ್ಯಾಕು
|| ಕಲಿತ ಹುಡುಗಿ ||

No comments:

Post a Comment