Saturday 17 September 2011

ಏಳು ಶ್ರೀ ಸಾಮಾನ್ಯ

ಭೂಮಿಯೆ ಹಾಸಿಗೆ
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ |೨|

ಏಳು ಶ್ರೀ ಸಾಮಾನ್ಯ
ಏಳಯ್ಯ ಬೆಳಗಾಯಿತು

ಏಳು ನೀ ಸದ್‍ಗೃಹಿಣಿ
ಏಳಮ್ಮ ಬೆಳಗಾಯಿತು

ಹಾಲು, ಪೇಪರ್ ನವರು ನಿನ್ನ ದರುಶನಕೆ ಕಾದಿಹರು
ಸ್ಕೂಲು ವ್ಯಾನು ಬಂದು ನಿನ್ನ ಕಂದನಿಗೆ ಕಾಯ್ದಿಹುದು
ಬೆಳಗಿನಾಟಕೆಂದು! ನಿಂಗೆ ಥೇಟರ್ ತೆಗೆದಿಹುದು
ದಿನ ಭವಿಷ್ಯದಲ್ಲಿ ನಿನಗೆ ಧನಲಾಭ ಬರದಿಹುದು

ಏಳು ಶ್ರೀ ಸಾಮಾನ್ಯಾ
ಎದ್ದೇಳು!

ಭೂಮಿಯೆ ಹಾಸಿಗೆ
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ

ಕನ್ನಡಾಂಬೆ ಸುಪ್ರಜಾ ನೀರೆ
ಸೂರ್ಯ ಬಂದಾಯ್ತು ಕಣ್ಣು ಬಿಡು

ಬೆಡ್ ಕಾಪಿ ಕುಡಿದಾಯ್ತೆ
ವಾಕಿಂಗು ಮುಗಿಸುಬಿಡು

ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು
ಬಸ್ಸು .... ಅಮೂಲ್ಯ ವೋಟನ್ನು ಹಾಕಿಬಿಡು
ಭೂಮಿಯೆ ಹಾಸಿಗೆ
ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ |೨|

No comments:

Post a Comment