Monday, 19 September 2011

ಚಂದ್ರಚಕೋರಿ

ಆ..ಆ...ಆ..
ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ
ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ
ಯಾರದೋ ಈ ಸ್ವಪ್ನ
ನಿನ್ನಂತೆ ನಾನೂ ಆಗೋ ಇಂಗಿತ

ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನ ನುಂಗಿ ಬಂದವಳ

ಹಾರಾಡೊ ಹಕ್ಕಿಗಳೆ
ನಿನ್ನೊಡನೆ ನಾ ಬರಲೇ?
ಚಿಲಿಪಿಲಿಯಾ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡುಗೋ ಮೋಡಗಳೆ ನಿನ್ನೊಮ್ಮೆ ಚುಂಬಿಸಲೇ?
ಹನಿಹನಿಯಾ ಜತೆ ಸೇರಿ ಧರೆಗಿಳಿವಾ ಆಸೆ ನನಗೆ

ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನಾ ಕುಂಚಾ ಎಲ್ಲಿದೇ?
ಸೌಂದರ್ಯ ಸವಿಯೋ ಸ್ಪೂರ್ತಿ ಇಲ್ಲಿದೇ

ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ..

ಇಬ್ಬನಿಯೇ ಇಬ್ಬನಿಯೇ
ನಿನ್ನ ಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನಾ ಸೇರಿ?
ಕಿರಣಗಳೇ ಕಿರಣಗಳೇ ನಾ ನಿನ್ನ ಬಳಸಿರಲೇ
ಭೂರಮೆಯ ಸ್ಪರ್ಶಿಸಲು ನಿನ್ನೊಡನೇ ಜಾರಿ ಜಾರಿ
ವಸಂತವೆ ನೀ ಬರೆದಾ ಚಿತ್ತಾರ ನಡುವಲ್ಲಿ
ಉಲ್ಲಾಸವೇ ನಾನಿಂದು ತೇಲಾಡಿದೆ ನಾನಿಲ್ಲಿ
ಇದು ಯಾವ ಕವಿಯು ಕಂಡ ಕಲ್ಪನೆ..
ಅವನ್ಯಾರೆ ಇರಲಿ ನನ್ನಾ ವಂದನೆ..

ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ
ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ
ಯಾರದೋ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನೂ ಆಗೋ ಇಂಗಿತ..

ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ

No comments:

Post a Comment