Friday, 16 September 2011

ಬಯಲು ದಾರಿ





ಬಾನಲ್ಲೂ ನೀನೇ ಭುವಿಯಲ್ಲು ನೀನೇ
ಬಾನಲ್ಲೂ ನೀನೇ ಭುವಿಯಲ್ಲು ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ ||ಬಾನಲ್ಲೂ ನೀನೇ||


ಹೂವಲ್ಲಿ ನಿನ್ನಾ ಮೊಗವನ್ನು ಕಂಡೆ
ಮೊಗದಲ್ಲಿ ನಿನ್ನಾ ಹೂನಗಯ ಕಂಡೆ
ನಗುವಲ್ಲಿ ನಿನ್ನಾ ಚೆಲುವನ್ನು ಕಂಡೆ
ಚೆಲುವಲ್ಲಿ ನಿನ್ನಾ ಒಲವನ್ನು ಕಂಡೆ
ಒಲವಿಂದ ಬಾಳ ಹೊಸ ದಾರಿ ಕಂಡೆ
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಮುಗಿಲಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ ||ಬಾನಲ್ಲೂ ನೀನೇ||


ಬಿರುಗಾಳಿ ಬೀಸಿ ಎದುರಾದರೇನು
ಭೂಕಂಪವಾಗಿ ನೆಲ ಬಿರಿದರೇನು
ಕಡಲೆಲ್ಲಾ ಹೊಮ್ಮಿ ಬಳಿ ಬಂದರೇನು
ಮಳೆಯಂತಹ ಬೆಂಕಿ ಧರೆಗಿಳಿದರೇನು
ಜೊತೆಯಿರಲು ನೀನು ಭಯಪಡೆನು ನಾನು
ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ
ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ ||ಬಾನಲ್ಲೂ ನೀನೇ||

No comments:

Post a Comment